ತುರುವೇಕೆರೆ: ಬೆಂಗಳೂರಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ ಇಂಟರ್ನಲ್ ಸೆಕ್ಯೂರಿಟಿ ಡಿವಿಜಿನ್ ನಲ್ಲಿ ನಡೆದ ಡಿ-ಸ್ವಾಟ್ ತರಬೇತಿಯಲ್ಲಿ ಕೇಂದ್ರ ವಲಯದ ಜಿಲ್ಲೆಗಳಲ್ಲಿಯೇ ತುಮಕೂರಿನ ತಂಡವು ಅತ್ಯುತ್ತಮ ತಂಡವಾಗಿ ಆಗಿ ಹೊರಹೊಮ್ಮಿದೆ.
ಈ ತಂಡವನ್ನು ತುಮಕೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲೆಯ ಇತರೆ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ. ಈ ತಂಡದಲ್ಲಿ ನಮ್ಮ ತುರುವೇಕೆರೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮಂಜುನಾಥ್ ಕೂಡ ಇದ್ದು, ತುರುವೇಕೆರೆ ಪೊಲೀಸ್ ಠಾಣೆಗೆ ಹಾಗೂ ತಾಲ್ಲೂಕಿಗೆ ಗೌರವವನ್ನು ತಂದುಕೊಟ್ಟಿದ್ದಾರೆ.
ಮಂಜುನಾಥ್ ರವರನ್ನು ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಲಕ್ಷ್ಮಿಕಾಂತ್, ತುರುವೇಕೆರೆ ವೃತ್ತ ನಿರೀಕ್ಷಕರು ,ತುರುವೇಕೆರೆ ಠಾಣೆ ಪಿಎಸ್ ಐಗಳಾದ ಕೆ ಗಣೇಶ್ ಮತ್ತು ರಾಮಚಂದ್ರಪ್ಪನವರು ಹಾಗೂ ತುರುವೇಕೆರೆ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ