ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿದೇಶಿ ಮಹಿಳೆ ಬ್ಯಾಗ್ ನಲ್ಲಿ ಕಂತೆ ಕಂತೆ ಭಾರತೀಯ ಕರೆನ್ಸಿ ಸಿಕ್ಕಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗ್ಗೇಜ್ ಸ್ಕ್ಯಾನಿಂಗ್ ಮಾಡುವಾಗ ಹಣ ಪತ್ತೆಯಾಗಿದೆ.
ಮಹಿಳೆಯನ್ನು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಬ್ಯಾಗ್ ನಲ್ಲಿ 15 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಆದರೆ ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸಿಲ್ಲ.