ಗುಟ್ಕಾ (ತಂಬಾಕು) ಸೇವಿಸಿದ್ದಕ್ಕೆ ಶಿಕ್ಷಕರಿಂದ ಛೀಮಾರಿ ಹಾಕಿಸಿಕೊಂಡ 17 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶದ ಮಹೋಬಾದಲ್ಲಿ ಈ ಘಟನೆ ನಡೆದಿದೆ. ತಂದೆಯ ಮುಂದೆ ಅವಮಾನಿತನಾದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಘಟನೆ ಬುಧವಾರ ನಡೆದಿದೆ. ಮಹೋಬಾದ ಕಬ್ರಾಯ್ ಪ್ರದೇಶದ ಬದ್ರಿ ಸಿಂಗ್ ಕನ್ಯಾ ಇಂಟರ್ ಕಾಲೇಜಿನ 11 ನೇ ತರಗತಿ ವಿದ್ಯಾರ್ಥಿ ಸಾಹು (17) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕ ಗುಟ್ಕಾ ಬಳಸುತ್ತಿದ್ದುದನ್ನು ಶಾಲೆಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನ ತಂದೆಯನ್ನು ಶಾಲೆಗೆ ಕರೆಸಲಾಗಿತ್ತು.
ಬಹಳ ಹೊತ್ತಾದರೂ ಬಾಲಕ ಹೊರಗೆ ಬಾರದೆ ಇದ್ದಾಗ ಮನೆಯವರು ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಾಲಕನನ್ನು ಕೆಳಗಿಳಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ.