ತನಿಖೆಯಲ್ಲಿ ಪ್ರಗತಿ ಕಾಣದೇ ತೆರೆಗೆ ಸರಿದಿದ್ದ ಹಳೇ ಪ್ರಕರಣಗಳಿಗೆ ಮರುಜೀವ ನೀಡಲಾಗಿದ್ದು, ಒಂದೇ ವಾರದಲ್ಲಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಾಧ ಕೃತ್ಯಗಳು ನಡೆದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಹಲವು ವರ್ಷಗಳ ಹಳೇ ಪ್ರಕರಣಗಳ ಮರು ತನಿಖೆ ನಡೆಸಲು ಕಮಿಷನರ್ ಅವರು ಸೂಚಿಸಿದ್ದರು.
‘ಅದರಂತೆ, ಮರು ತನಿಖೆ ನಡೆಸಲಾಗುತ್ತಿದೆ. ಇದೇ ವಾರದಲ್ಲಿ 20 ಪ್ರಕರಣಗಳನ್ನು ಭೇದಿಸಲಾಗಿದೆ. ಈ ಪೈಕಿ 10 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.