ರೈಲಿನಿಂದ ಹಿಂತಿರುಗುವಾಗ ಪ್ಲಾಟ್ ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿ ತಂದೆ ದುರಂತ ಅಂತ್ಯ ಕಂಡಿದ್ದಾರೆ. ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆಗ್ರಾದ ಖ್ಯಾತ ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ. ಲಖನ್ ಸಿಂಗ್ ಗಲಾವ್ ನಿಧನರಾದರು.
ಡಾ. ಲಖನ್ ತಮ್ಮ ಮಗಳನ್ನು ರೈಲು ಹತ್ತಿಸಿ ಬಿಡಲು ನಿಲ್ದಾಣಕ್ಕೆ ಬಂದಿದ್ದರು. ಮಗಳನ್ನು ಹತ್ತಿಸಿಕೊಂಡು ರೈಲು ಚಲಿಸುತ್ತಿದ್ದಾಗ, ಚಲಿಸುತ್ತಿದ್ದ ರೈಲಿನಿಂದ ಹೊರಬರಲು ಯತ್ನಿಸಿದಾಗ ತಂದೆಗೆ ಅವಘಡ ಸಂಭವಿಸಿದೆ. ಪ್ಲಾಟ್ ಫಾರ್ಮ್ ಮತ್ತು ರೈಲಿನ ನಡುವೆ ಲಖನ್ ಸಿಕ್ಕಿ ಹಾಕಿಕೊಂಡಿದ್ದರು. ಈ ದುರಂತ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರ ಬಂದಿವೆ.