ಬೀದರ್ ಜಿಲ್ಲೆಯ ಮಾದಿಗ ದಂಡರು ಮಾದಿಗ ಮೀಸಲಾತಿ ಹೋರಾಟ ಸಮಿತಿ, ಔರಾದ ತಾಲ್ಲೂಕ ಘಟಕ, SC ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ನವೆಂಬರ್ 11 ರಂದು ಹೈದರಾಬಾದ್ ನಲ್ಲಿ ಹಲೋ ಮಾದಿಗ, ಚಲೋ ಹೈದರಾಬಾದ್ ಮಾದಿಗರ ವಿಶ್ವರೂಪ ಮಹಾಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಔರಾದ ತಾಲೂಕಿನ ಸಂತಪೂರನಲಿ ಮಾದಿಗ ದಂಡೂರು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿದಾಸ ಮೇಘ ಅವರ ನೇತೃತ್ವದಲ್ಲಿ ಕರ ಪತ್ರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಯುವ ನಾಯಕ ಸುಧಾಕರ ಕೊಳ್ಳರು, ನಾಗೇಶ ಸಾಕರೆ, ಸಮಾಧಾನ ಮೇತ್ರೆ, ಮಾರುತಿ ಸೂರ್ಯವಂಶಿ , ಬಿಲಾಸನ್, ಮುಂತಾದರೂ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್