ಛತ್ತೀಸ್ ಗಢದ ಕಂಕರ್ ನಲ್ಲಿ ಐಇಡಿ ಸ್ಫೋಟ ಗಡಿ ಭದ್ರತಾ ಪಡೆಯ ಕಾನ್ ಸ್ಟೆಬಲ್ ಹಾಗೂ ಇಬ್ಬರು ಮತಗಟ್ಟೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಬಿಎಸ್ ಎಫ್ ಮತ್ತು ಜಿಲ್ಲಾ ಪಡೆಗಳ ಜಂಟಿ ತಂಡವು ಕ್ಯಾಂಪ್ ಮಾರ್ಬೇಡದಿಂದ ರೆಂಗಘಾಟಿ ರೆಂಗಗೊಂದಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿಗಳೊಂದಿಗೆ ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿದೆ.
ಬಿಎಸ್ ಎಫ್ ಕಾನ್ ಸ್ಟೇಬಲ್ ಪ್ರಕಾಶ್ ಚಂದ್ ಗಾಯಗೊಂಡಿದ್ದಾರೆ. ಕಾಲಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಛೋಟೆಪೇಟಿಯಾಗೆ ಸ್ಥಳಾಂತರಿಸಲಾಗಿದೆ. ಇಬ್ಬರು ಮತಗಟ್ಟೆ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಛತ್ತೀಸ್ ಗಢದಲ್ಲಿ ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಈ ಘಟನೆ ನಡೆದಿದೆ.