ಯಾದಗಿರಿಯಲ್ಲಿ ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ.
16 ಆರೋಪಿಗಳ ವಿಚಾರಣೆ ವೇಳೆ ಆರೋಪಿಗಳ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ಮಾಡಲಾಗಿದ್ದು ಸರ್ಕಾರ ಎಂಬ ಹೆಸರಲ್ಲಿ ಸೇವ್ ಆಗಿದ್ದ ನಂಬರ್ನಿಂದ ವಾಟ್ಸಾಪ್ ಕಾಲ್ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಬಂಧನಕ್ಕೊಳಗಾದ ಆರೋಪಿ ನಂಬರ್ ಗೆ ಪರೀಕ್ಷೆಯ ಹಿಂದಿನ ದಿನ ವಾಟ್ಸಾಪ್ ಆಡಿಯೋ ಕಾಲ್ ಬಂದಿದೆ. ಆಡಿಯೋ ಕಾಲ್ ಮಾಡಿ ಮಾಹಿತಿ ನೀಡ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.