ಬೆಂಗಳೂರು: ಮದುವೆಯಾಗಿದ್ದರೂ ಪತಿಯಿಂದ ದೂರವಾಗಿ ಪ್ರಿಯತಮನ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿ ಹಾಗೂ ಆಕೆಯ ಪ್ರಿಯತಮ ಒಟ್ಟಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳ ಮೂಲದ ಸೌಮಿನಿ ದಾಸ್ (20), ಹೋಂ ನರ್ಸ್ ಮಾಡುತ್ತಿದ್ದ ಕೇರಳ ಮೂಲದ ಅಭಿಲ್ ಅಬ್ರಹಾಂ (29) ಮೃತರು ಎಂದು ಗುರುತಿಸಲಾಗಿದೆ.