ಕೊರಟಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರಟಗೆರೆ ತಾಲ್ಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಕೊರಟಗೆರೆ ತಾಲ್ಲೂಕಿನ ಎರಡು ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿ, ಬರ ಅಧ್ಯಯನ ನಡೆಸಿದರು. ರೈತರು ಬಿತ್ತನೆ ಮಾಡಿರುವ ಎಲ್ಲಾ ಬೆಳೆಗಳು ಮಳೆ ಇಲ್ಲದ ಕಾರಣ ಸಂಪೂರ್ಣವಾಗಿ ನಾಶವಾಗಿರುವ ಹಿನ್ನೆಲೆ ಭೇಟಿ ನೀಡಿದರು.
ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಬೋಡ ಬಂಡೆನಹಳ್ಳಿ ಗ್ರಾಮದ ಸರ್ವೆ ನಂಬರ್ 72 ರಲ್ಲಿ ರಾಗಿ, ಜೋಳ, ಶೇಂಗಾ ಬೆಳೆಗಳನ್ನು ವೀಕ್ಷಿಸಿದರು ಹಾಗೂ ಕಾಮೇನಹಳ್ಳಿ ಗ್ರಾಮದ ರೈತರ ಹೊಲಕ್ಕೆ ಭೇಟಿ ನೀಡಿ ಹೊಲದಲ್ಲಿ ಒಣಗಿ ಹೋಗಿರುವ ಬೆಳೆಗಳನ್ನ ಪರಿಶೀಲಿಸಿ ಸರ್ಕಾರ ಶೀಘ್ರವಾಗಿ ಪರಿಹಾರ ನೀಡಬೇಕಿದೆ ರೈತ ಬಿತ್ತಿರುವ ಎಲ್ಲಾ ಬೆಳೆಗಳು ನಾಶವಾಗಿವೆ ಆದಷ್ಟು ಬೇಗ ರೈತರಿಗೆ ಸಿಗಬೇಕಾದ ಪರಿಹಾರದ ಹಣ ಅವರ ಕೈ ಸೇರಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ