ಬೆಂಗಳೂರು: ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಲಾಗಿದೆ. ಫುಟ್ ಪಾತ್ ನಲ್ಲಿದ್ದ ಅಕ್ರಮ ಶೆಡ್, ಬಟ್ಟೆ ಅಂಡಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರವುಗೊಳಿಸಿದೆ.
ಬಿಬಿಎಂಪಿ ಮಾರ್ಷಲ್ ಗಳ ತಂಡ ಸ್ಥಳಕ್ಕೆ ಆಗಮಿಸಿ, ಜೆಸಿಬಿ ಮೂಲಕ ಅಂಗಡಿಗಳನ್ನ ಕೆಡವಲಾಗಿದೆ. ಆ ಮೂಲಕ ಪಾದಚಾರಿಗಳ ಮಾರ್ಗ ಸುಗಮಗೊಳಿಸಲಾಗಿದೆ.
ಅಂಗಡಿಗಳ ತೆರವಿನಿಂದ ಬೀದಿಬದಿ ವ್ಯಾಪಾರಿಗಳು ಅತಂತ್ರಸ್ಥಿತಿಯಲ್ಲಿದ್ದಾರೆ. ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.