ಬೆಳಗಾವಿ: ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಅಧಿಕೃತ ದಿನಾಂಕವನ್ನ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಅನೌಪಚಾರಿಕವಾಗಿ ಡಿಸೆಂಬರ್ 4 ರಿಂದ ಅಧಿವೇಶನ ನಡೆಯಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಹೇಳಿದರು.
ಸುವರ್ಣವಿಧಾನಸೌಧಲ್ಲಿ ಮಾದ್ಯಮಗಳೊಮನದಿಗೆ ಮಾತನಾಡಿದ ಅವರು ಸರ್ಕಾರದಿಂದ ಈವರೆಗೂ ಅಧಿಕೃತವಾಗಿ ದಿನಾಂಕ ನಮಗೆ ತಿಳಿಸಿಲ್ಲ.
ಅಧಿವೇಶನ ಅರ್ಥಪೂರ್ಣ ಆಗಬೇಕು ಅಂದರೇ ಪ್ರತಿಭಟನೆ ಕಡಿಮೆ ಆಗಬೇಕು. ನಮ್ಮ ಶಾಸಕರಲ್ಲಿ ಬೆಳಗಾವಿ ಅಧಿವೇಶನ ಅಂದರೇ ಪ್ರತಿಭಟನೆ ಅಂತಾ ಆಗಿದೆ. ಹೀಗಾಗಿ ಪ್ರತಿಭಟನೆಗಳು ಕಡಿಮೆ ಆಗಬೇಕು. ಹೀಗಾಗಿ ರೈತರ ಸಮಸ್ಯೆ ನಿವಾರಿಸುವಂತೆ ಸಂಬಂಧಿಸಿದ ಸಚಿವರಿಗೆ ಹೇಳುತ್ತೇವೆ ಎಂದರು.