ರಾಜಸ್ಥಾನ: ರೈಲ್ವೇ ಹಳಿಯಲ್ಲಿ ಪಟಾಕಿ ಸಿಡಿಸಿದ ಯೂಟ್ಯೂಬರ್ ಗಾಗಿ ರೈಲ್ವೆ ರಕ್ಷಣಾ ಪಡೆ ಹುಡುಕಾಟ ನಡೆಸುತ್ತಿದೆ ರಾಜಸ್ಥಾನದ ಫುಲೇರಾ-ಅಜ್ಮೀರ್ ಪ್ರದೇಶದ ದಂತ್ರಾ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಯೂಟ್ಯೂಬರ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಆರ್ಪಿಎಫ್ ಈ ವಿಷಯವನ್ನು ಗಮನಿಸಿ ದೃಶ್ಯದಲ್ಲಿರುವ ವ್ಯಕ್ತಿಯನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಿತು.
ಮಾರ್ಗ ಮಧ್ಯೆ ಪಟಾಕಿ ಸಿಡಿಸಲಾಯಿತು. ಆಗ ಭಾರೀ ಹೊಗೆ ಕಾಣಿಸಿಕೊಂಡಿದೆ. ಬೂದಿ ಹಾವಿನ ಆಕಾರದಲ್ಲಿತ್ತು. ಯೂಟ್ಯೂಬರ್ ವಿರುದ್ಧ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈಲ್ವೇ ಸಂರಕ್ಷಣಾ ಪಡೆಯ ವಾಯುವ್ಯ ವಿಭಾಗಕ್ಕೆ ಕರೆಗಳನ್ನು ಮಾಡಲಾಗಿತ್ತು. ಇದರೊಂದಿಗೆ ಆ ವಿಡಿಯೋದಲ್ಲಿರುವ ಯುವಕನ ಗುರುತು ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರೈಲ್ವೆ ಕಾಯಿದೆಯ ಸೆಕ್ಷನ್ 145, 147 ರೈಲ್ವೆ ಹಳಿಗಳು ಮತ್ತು ಪ್ಲಾಟ್ ಫಾರ್ಮ್ಗಳಲ್ಲಿ ವೀಡಿಯೊ ಚಿತ್ರೀಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ ರೂ 1000 ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.