ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ‘ಅಮೃತಧಾರೆ’ ಹೆಸರಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್ ಸ್ಥಾಪಿಸಲಾಗಿದೆ.
ತೀವ್ರ ನಿಗಾ ಘಟಕದಲ್ಲಿರುವ ಶಿಶುಗಳಿಗೆ ನಿತ್ಯ ಒಂದೂವರೆ ಲೀಟರ್ ಎದೆಹಾಲು ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿನ ದಾನಿಗಳಿಂದ 270 ಲೀಟರ್ ಎದೆಹಾಲು ಸಂಗ್ರಹಿಸಲಾಗಿದೆ.
ಆಸ್ಪತ್ರೆ ಹೊರಗಿನ ತಾಯಂದಿರಿಂದ 19 ಲೀಟರ್ ಎದೆಹಾಲನ್ನು ದಾನ ಪಡೆದಿದ್ದು, ನೂರಾರು ಕಂದಮ್ಮಗಳಿಗೆ ಅನುಕೂಲವಾಗಿದೆ.
ಎದೆಹಾಲನ್ನು ಪಾಶ್ಚಿಕರಿಸಿ ಪ್ಯಾಕ್ ಮಾಡಲಾಗುತ್ತದೆ. ಇದನ್ನು 120 ಡಿಗ್ರಿ ಸೆಲ್ಸಿಯಸ್ ನಲ್ಲಿ ಸಂರಕ್ಷಿಸಿ ಇಡಲಾಗುತ್ತದೆ. ಆರು ತಿಂಗಳವರೆಗೂ ಈ ಹಾಲನ್ನು ಬಳಸಬಹುದಾಗಿದೆ.