ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಅಲೀಮಾ ಉರುಫ್ ಬಿ. ಅನುರಾಧಾ (33) ಸಾವಿನ ರಹಸ್ಯ ಭೇದಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಕೊಲೆ ಆರೋಪದಡಿ ಪತಿ ರಾಜಶೇಖರ್ ನನ್ನು(28) ಬಂಧಿಸಿದ್ದಾರೆ.
ಅನಂತಪುರದ ಆರೋಪಿ ರಾಜಶೇಖರ್, ಪತ್ನಿ ಅಲೀಮಾ ಅವರನ್ನು ಅ.29ರಂದು ಕೊಲೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿ ನಾಟಕವಾಡಿದ್ದ.
ಅಲೀಮಾ ಅವರದ್ದು ಕೊಲೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ಗೊತ್ತಾಗುತ್ತಿದ್ದಂತೆ, ರಾಜಶೇಖರ್ ನನ್ನು ಬಂಧಿಸಲಾಗಿದೆ.