ಮಧ್ಯಪ್ರದೇಶದ ಚಂದ್ವಾರ ಜಿಲ್ಲೆಯ ಕೊತ್ವಾಲಿ ಪೊಲೀಸರು ಇತ್ತೀಚೆಗೆ ತಪಾಸಣೆ ವೇಳೆ 60 ಅಕ್ರಮ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ನಡುವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದರು.
ಆದರೆ ವಶಪಡಿಸಿಕೊಂಡ ಮದ್ಯದ ಬಾಟಲಿಗಳು ಏಕಾಏಕಿ ನಾಪತ್ತೆಯಾಗಿದ್ದು, ನ್ಯಾಯಾಲಯ ಇದಕ್ಕೆ ಕಾರಣ ಕೇಳಿದಾಗ ಇಲಿಗಳು ಮದ್ಯದ ಬಾಟಲಿಗಳನ್ನು ಕುಡಿದಿವೆ.
ಈ ಪೈಕಿ ಒಂದನ್ನು ಸೆರೆ ಹಿಡಿಯಲಾಗಿದ್ದು ಉಳಿದ ಇಲಿಗಳು ತಪ್ಪಿಸಿಕೊಂಡವು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.