ಗಡಿ ಭದ್ರತಾ ಪಡೆ (ಬಿಎಸ್ ಎಫ್) ಸಿಬ್ಬಂದಿ ಶುಕ್ರವಾರ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಮತ್ತು 56.5 ಲಕ್ಷ ರೂಪಾಯಿ ಮೌಲ್ಯದ ಎಂಟು ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಒಬ್ಬ ಭಾರತೀಯ ಪ್ರಜೆಯನ್ನು ಸಹ ಬಿಎಸ್ ಎಫ್ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಗಡಿ ಹೊರ ಠಾಣೆಯಲ್ಲಿ, BSF ಸಿಬ್ಬಂದಿಗಳು ಕಳ್ಳಸಾಗಣೆದಾರರು ಬಾಂಗ್ಲಾದೇಶದ ಕಡೆಯಿಂದ ಭಾರತದ ಕಡೆಗೆ ಬೇಲಿಯ ಮೇಲೆ ಪ್ಯಾಕೆಟ್ ಅನ್ನು ಎಸೆದು ಓಡಿ ಹೋಗುವುದನ್ನು ನೋಡಿದರು.
ಇದರ ನಂತರ, ಅವರು ಪ್ರದೇಶದ ಜವಾಬ್ದಾರಿಯುತ ಬಿಎಸ್ ಎಫ್ ನ ಗಸ್ತು ತಂಡಕ್ಕೆ ಮಾಹಿತಿ ನೀಡಿದರು. ಕಳ್ಳಸಾಗಾಣಿಕೆದಾರನೊಬ್ಬ ಪ್ಯಾಕೆಟ್ ತೆಗೆದುಕೊಳ್ಳಲು ಬರುತ್ತಿದ್ದಂತೆ ಗಸ್ತು ತಿರುಗುತ್ತಿದ್ದ ತಂಡದ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.
ಪ್ಯಾಕೆಟ್ ಪರಿಶೀಲಿಸಿದಾಗ ಎಂಟು ಚಿನ್ನದ ಬಿಸ್ಕತ್ತುಗಳು ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ. ವಿಚಾರಣೆ ವೇಳೆ, ಬಂಧಿತ ವ್ಯಕ್ತಿ ಗೌತಮ್ ರೈ, ಬಾಂಗ್ಲಾದೇಶದ ಸಿರಾಜುಲ್ಲಾ ಶೇಖ್ ಎಂಬುವರಿಂದ ಚಿನ್ನದ ಬಿಸ್ಕತ್ತುಗಳನ್ನು ತೆಗೆದುಕೊಂಡಿದ್ದಾಗಿ ಬಿಎಸ್ ಎಫ್ ಗೆ ಮಾಹಿತಿ ನೀಡಿದ್ದಾನೆ.
ಚಿನ್ನದ ಬಿಸ್ಕತ್ ಗಳನ್ನು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಇನ್ನೊಬ್ಬ ವ್ಯಕ್ತಿಗೆ ಹಸ್ತಾಂತರಿಸಬೇಕಿತ್ತು ಎಂದು ಬಂಧಿತ ಆರೋಪಿಗಳು ತಿಳಿಸಿದ್ದಾರೆ.
ವಿಚಾರಣೆಯ ನಂತರ ರೈ ಅವರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಪಡಿಸಿಕೊಂಡ ಚಿನ್ನದ ಬಿಸ್ಕತ್ ಗಳೊಂದಿಗೆ ಚಾಪ್ರಾದಲ್ಲಿರುವ ಕಸ್ಟಮ್ಸ್ ಕಛೇರಿಗೆ ಹಸ್ತಾಂತರಿಸಲಾಗಿದೆ.