ಬೆಂಗಳೂರು: ಚುನಾವಣಾ ರಾಜಕಾರಣಕ್ಕೆ ನಿವೃತ್ತಿಗೆ ಯಾರ ಒತ್ತಡವೂ ಇಲ್ಲ. ನಾನು ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಹೆಚ್ಚು ಅವಕಾಶ ಪಡೆದಿದ್ದೇವೆ. ಪಕ್ಷಕ್ಕೆ ನಮ್ಮ ಅನುಭವ ಧಾರೆ ಎರೆಯಲು ನಿಶ್ಚಯ ಮಾಡಿದ್ದೇವೆ. ಇಚ್ಛಾಶಕ್ತಿ ಇದ್ದರೆ ಯಾರು ಏನೂ ತೊಂದರೆ ಮಾಡಲು ಆಗಲ್ಲ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.
2019ರಲ್ಲೇ ರಾಜಕೀಯ ನಿವೃತ್ತಿ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆ. ಸಾಯುವವರೆಗೆ ನಾನೇ ಇರಬೇಕು ಎನ್ನುವಂತಾಗಬಾರದು. ಬಿಜೆಪಿಗೆ ಹಿರಿತನದ ಕೊರತೆ ಕಾಡುತ್ತದೆ ಎಂದು ಅನ್ನಿಸುವುದಿಲ್ಲ. ಚುನಾವಣಾ ರಾಜಕೀಯ ನಿವೃತ್ತಿ ನನ್ನ ಸ್ವಂತ ನಿರ್ಧಾರ ಎಂದರು.
ಸಂಸದೀಯ ಮಂಡಳಿಯಲ್ಲಿ ನಿರ್ಧಾರ ಆಗಿದೆಯಾ ಅಂತಾ ಕೇಳಿದ್ದೆ. ನಾನು ಈ ರೀತಿ ಹೇಳಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಈ ಬಗ್ಗೆ ನಾನೇ ಸ್ಪಷ್ಟೀಕರಣ ಕೊಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದರು.
ಬಿ.ಎಸ್.ಯಡಿಯೂರಪ್ಪ ನನಗೆ ಕರೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನಿವೃತ್ತಿ ಪಡೆಯಿರಿ ಅಂತಾ ಯಾರೂ ಹೇಳಿಲ್ಲ, ಆದೇಶ ಸಹ ಮಾಡಿಲ್ಲ. ನನ್ನ ನಿವೃತ್ತಿ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಮೊದಲೇ ಹೇಳಿದ್ದೆ ಎಂದು ಹೇಳಿದರು.