ವಿರೋಧ ಪಕ್ಷ ನಾಯಕ ಆಯ್ಕೆ ಹೈಕಮಾಂಡ್ ಗೆ ಕಗ್ಗಟ್ಟಾಗಿದ್ದು, ಈ ಹುದ್ದೆಗೆ ಒಕ್ಕಲಿಗರು ಮತ್ತು ಒಬಿಸಿ ನಾಯಕರಿಗೆ ಪ್ರಾತಿನಿಧ್ಯವನ್ನು ನೀಡುವ ನಿರೀಕ್ಷೆಯಿದೆ. ನವೆಂಬರ್ 17 ರಂದು ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹೈಕಮಾಂಡ್ ಕಳುಹಿಸಿದ ವೀಕ್ಷಕರು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ.
ಅಲ್ಲದೇ ನ.17 ರಂದು ಸಭೆ ನಿಗದಿಯಾಗಿದ್ದು, ಅದೇ ದಿನ ವಿರೋಧ ಪಕ್ಷದ ನಾಯಕರ ಹೆಸರು ಪ್ರಕಟಿಸುವ ನಿರೀಕ್ಷೆ ಇದೆ.