ಟೆಲ್ ಅವಿವ್: ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೀಪಾವಳಿಯ ಸಂದರ್ಭದಲ್ಲಿ ಜನರಿಗೆ ಶುಭ ಹಾರೈಸಿದೆ. ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ದೀಪಾವಳಿ ಸಂದೇಶದಲ್ಲಿ ದೀಪಾವಳಿಯು “ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಡುಕಿನ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ” ಸಂಕೇತವಾಗಿದೆ ಎಂದು ಹೇಳಿದೆ.
ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್ ನಲ್ಲಿ ಅವರ ಆಚರಣೆಯ ಚಿತ್ರಗಳನ್ನು ಹಂಚಿಕೊಂಡಿದೆ. ಅಧಿಕಾರಿಗಳು ದೀಪಗಳನ್ನು ಬೆಳಗಿಸುತ್ತಿರುವುದನ್ನು ಚಿತ್ರಗಳು ತೋರಿಸಿವೆ, ಈ ಸಂದರ್ಭದಲ್ಲಿ ಭಾರತೀಯ ತಿಂಡಿಗಳು ಮತ್ತು ಸಿಹಿತಿಂಡಿಗಳನ್ನು ಸಹ ನೀಡಲಾಯಿತು.