ಬೆಂಗಳೂರು: ಪೊಲೀಸ್ ಇಲಾಖೆಯ ಎಲ್ಲ ವಾಹನಗಳ ಮೇಲೆ ಕಡ್ಡಾಯವಾಗಿ ‘ಪೊಲೀಸ್‘ ಎಂದು ಸ್ಟಿಕ್ಕರಿಂಗ್ ಮಾಡಿಸುವಂತೆ ಡಿಜಿ ಸೂಚನೆ ಮೇರೆಗೆ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಎಸ್. ಮುರುಗನ್ ಆದೇಶಿಸಿದ್ದಾರೆ. ದ್ವಿಚಕ್ರ ವಾಹನಗಳಿಗೆ 8*2 ಇಂಚು(ಕನಿಷ್ಠ), ನಾಲ್ಕು ಚಕ್ರದ ವಾಹನಗಳಿಗೆ 12*3 ಇಂಚು ಸ್ಟಿಕ್ಕರಿಂಗ್ ಮಾಡಿಸಬೇಕು.
ಕೆಲವು ವಾಹನಗಳ ಮೇಲಿನ ಸ್ಟಿಕ್ಕರಿಂಗ್ ಅನ್ನು ಅಧಿಕಾರಿಗಳು ತೆಗೆಸಿ ಹಾಕಿದ್ದು, ಇದು ನಿಯಮ ಬಾಹಿರವಾಗಿರುತ್ತದೆ ಎಂದು ಮುರುಗನ್ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.