ಟಾಟಾ ಮಾಲೀಕತ್ವದ ಏರ್ ಇಂಡಿಯಾ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಇದೀಗ ಬೆಂಗಳೂರು-ಮಂಗಳೂರಿಗೆ ಎರಡು ಹೊಸ ವಿಮಾನ ಸೇವೆ ಘೋಷಿಸಿದೆ. ನವೆಂಬರ್ 15 ರಿಂದ ಹೊಸ ವಿಮಾನ ಸೇವೆ ಆರಂಭಗೊಳ್ಳುತ್ತಿದೆ.
ಬೆಂಗಳೂರು-ಮಂಗಳೂರು ವಿಮಾನ ಸೇವೆ ಚೆನ್ನೈ, ಕಣ್ಣೂರು, ತಿರುವನಂತಪುರಂ ಹಾಗೂ ವಾರಣಾಸಿಯನ್ನೂ ಕನೆಕ್ಟ್ ಮಾಡಲಾಗುತ್ತಿದೆ.
ನವೆಂಬರ್ 25ರ ವರೆಗೆ ಮಾತ್ರ ವಾರಣಾಸಿ-ಮಂಗಳೂರು ಸಂಪರ್ಕ ವಿಮಾನ ಸೇವೆ ಇರಲಿದೆ. 10 ದಿನಗಳ ಬಳಿಕ ಈ ವಿಮಾನ ಸೇವೆ ಚೆನ್ನೈ-ಮಂಗಳೂರು ವಯಾ ಬೆಂಗಳೂರು ಆಗಿ ಬದಲಾಗಲಿದೆ.