ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿರುವ ಭಯಾನಕ ಘಟನೆ ಬಳ್ಳಾರಿ ಜಿಲ್ಲೆ ತೋರಣಗಲ್ ಪಟ್ಟಣದ ಘೋರ್ಪಡೆ ನಗರದಲ್ಲಿ ನಡೆದಿದೆ.
11ನೇ ವಾರ್ಡ್‌ನ ಪುರಸಭೆ ಸದಸ್ಯ ನಾಗರಾಜ ನಾಯ್ಕ(32) ಮೇಲೆ ಶಿವಕುಮಾರ್ ಎಂಬುವವರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಚರಂಡಿ ವಿಚಾರಚಾಗಿ ಇವರಿಬ್ಬರ ನಡುವೆ ದ್ವೇಷ ಇತ್ತು ಅದೇ ದ್ವೇಷದ ಹಿನ್ನೆಲೆ ಹಲ್ಲೆ ನಡೆಸಲಾಗಿದೆ. ತೆಲೆಗೆ, ಬೆನ್ನಿಗೆ, ಕೈಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ನಾಗರಾಜ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತೋರಣಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.