ಯುನೆಸ್ಕೋ(UNESCO) ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಐತಿಹಾಸಿಕ ಸ್ತಂಭವನ್ನು ಕೊರೆದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಕರ್ನಾಟಕದ ದತ್ತಿ ಇಲಾಖೆಗೆ ನೋಟಿಸ್ ನೀಡಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜ ಕಟ್ಟಲು ಸ್ತಂಭವನ್ನು ಕೊರೆಯಲಾಗಿದೆ.
ಐತಿಹಾಸಿಕ ಸ್ತಂಭಗಳಲ್ಲಿ ರಂಧ್ರಗಳನ್ನು ಮಾಡುವ ಮೊದಲು ರಾಜ್ಯ ಸರ್ಕಾರವು ಯಾವುದೇ ಅನುಮತಿಗಳನ್ನು ಪಡೆದಿಲ್ಲ ಎಂದು ಎಎಸ್ ಐ ಆರೋಪಿಸಿದೆ.