ಬೆಂಗಳೂರು: ಪ್ರತಿ ಮಂಗಳವಾರ, ವಾಡಿಕೆಯಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ವಾರದ ರಜೆ ಕೊಡಲಾಗುತ್ತದೆ. ಆದರೆ ನ.14ರ ಮಂಗಳವಾರ ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಉದ್ಯಾನವನದ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇರುವುದರಿಂದ, ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗುವಂತೆ ಸದರಿ ದಿನದಂದು ಉದ್ಯಾನವನದ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನವನ ಇವುಗಳನ್ನು ತೆರೆದಿಡಲಾಗುತ್ತದೆ.
ಸಾರ್ವಜನಿಕರು ಈ ಬದಲಾವಣೆ ಹಾಗೂ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.