ಬೆಂಗಳೂರು: ನಡುರಸ್ತೆಯಲ್ಲೇ ಪುಂಡನೊಬ್ಬ ಯುವತಿಯ ಬಟ್ಟೆಯನ್ನು ಎಳೆದಾಡಿ, ಕಿರುಕುಳ ನೀಡಿರವ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿರುವ ಡಿಸಿಪಿ ಕಚೇರಿ ಎದರು ನಡೆದಿದೆ.
ನವೆಂಬರ್ 6ರಂದು ರಾತ್ರಿ 10.40ರ ಸುಮಾರಿಗೆ ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ, ಬೈಕ್ ನಲ್ಲಿ ಬಂಡ ದುಷ್ಕರ್ಮಿ ಯುವತಿಯ ಬಟ್ಟೆಯನ್ನು ಎಳೆದಾಡಿ ಅಶ್ಲೀಲವಾಗಿ ನಿಂದಿಸಿ ಎಸ್ಕೆಪ್ ಆಗಿದ್ದಾನೆ.
ಯುವತಿ ನವೆಂಬರ್ 8ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದುಷ್ಕರ್ಮಿಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.