ಬೆಂಗಳೂರಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವರ ವಿಗ್ರಹ ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಲಮುರಿ ದೇವಸ್ಥಾನದಲ್ಲಿ ನಡೆದಿದೆ.
ಬಲಮುರಿ ದೇವಸ್ಥಾನದ ಕಟ್ಟಡದಲ್ಲಿ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹವಿದ್ದು, ಗೋಪುರದ ಮೇಲ್ಬಾಗದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಹಿಡಿದಿರುವ ಆಯುಧವನ್ನ ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.
ಕಳೆದ 8 ನೇ ತಾರೀಖು ವಿಗ್ರಹ ಭಗ್ನಗೊಳಿಸಿರುವ ಕುರಿತು ಗೊತ್ತಾಗಿದೆ. ಆದ್ರೆ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಈಗ ದೂರು ಕೊಡಲಾಗಿದೆ.