ತಮಿಳುನಾಡು: ತಮಿಳುನಾಡಿನ ಜಾವಡಿ ಬೆಟ್ಟದಲ್ಲಿ ಭಾರೀ ದುರಂತವೊಂದು ನಡೆದಿದೆ. ದೀಪಾವಳಿ ಹಬ್ಬದಂದು ಬೇಟೆಗೆ ಹೋಗಿ ಜಿಂಕೆಯನ್ನು ಹೊಡೆಯುವ ಬದಲು ಗುರಿ ತಪ್ಪಿ ತನ್ನ ಸ್ನೇಹಿತನಿಗೆ ಗುಂಡು ಹೊಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಜಮುನಾಮರತೂರಿನ ಶಕ್ತಿವೇಲ್, ಪ್ರಕಾಶ್ ಮತ್ತು ಶಕ್ತಿವಾಸನ್ ಬೇಟೆಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.