ಉತ್ತರ ಪ್ರದೇಶದ ಬರೇಲಿ ಪ್ರದೇಶದಲ್ಲಿ ಶನಿವಾರ ಮಧ್ಯರಾತ್ರಿ ದುಷ್ಕೃತ್ಯವೊಂದು ನಡೆದಿದೆ. ಶಾಹಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಟಿಯಾ ಗ್ರಾಮದ ಅಂಜಲಿ(35) ಎಂಬಾಕೆಯ ಪತಿ ನೇಪಾಳ ಸಿಂಗ್ ತನ್ನ ಪತ್ನಿಯನ್ನ ಸಜೀವವಾಗಿ ದಹನ ಮಾಡಿದ್ದಾನೆ. ಪತ್ನಿ ಅಂಜಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.
ನೇಪಾಳ ಸಿಂಗ್ ಇವರಿಬ್ಬರನ್ನು ಹುಲ್ಲಿನ ಬಣವೆಯ ಮೇಲೆ ಕಂಡು, ಕೋಪದಲ್ಲಿ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಅಂಜಲಿ ಸಜೀವ ದಹನವಾಗಿದ್ದಾಳೆ. ಗೆಳೆಯನ ಸ್ಥಿತಿ ತಿಳಿದುಬಂದಿಲ್ಲ.
ಪರ ಪುರುಷನೊಂದಿಗೆ ಹೆಂಡತಿಯ ಸಂಬಂಧ; ಪತ್ನಿ, ಮಕ್ಕಳನ್ನು ಕೊಂದ ವ್ಯಕ್ತಿ
ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಖರ್ದಾದಲ್ಲಿ ಇತ್ತೀಚಿನ ದೌರ್ಜನ್ಯ ನಡೆದಿದೆ. ವೃಂದಾಬನ್ ಕರ್ಮಾಕರ್ ಅವರು ವೃತ್ತಿಯಲ್ಲಿ ಗಾರ್ಮೆಂಟ್ ವ್ಯಾಪಾರಿ. ಬೇರೆ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ಕರ್ಮಾಕರ್ ತಮ್ಮ ಪತ್ನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಅಷ್ಟಾದರೂ ಆಕೆ ವಿವಾಹೇತರ ಸಂಬಂಧವನ್ನು ಬಿಟ್ಟಿಲ್ಲ.
ಇದರಿಂದ ಕೋಪಗೊಂಡ ಕರ್ಮಾಕರ್ ಹರಿತವಾದ ಆಯುಧದಿಂದ ಪತ್ನಿಯನ್ನು ಕೊಂದಿದ್ದಾನೆ. ನಂತರ ತನ್ನ 16 ವರ್ಷದ ಮಗಳು ಮತ್ತು 9 ವರ್ಷದ ಮಗನನ್ನು ಕೊಂದಿದ್ದಾನೆ. ಆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.