ಮಣಿಪುರ ರಾಜಧಾನಿ ಇಂಫಾಲ್ ವಿಮಾನ ನಿಲ್ದಾಣದ ಬಳಿ ಅಪರಿಚಿತ ಡ್ರೋನ್ ಗಳ ಉಪಸ್ಥಿತಿ ಪತ್ತೆಯಾಗಿದೆ. ಘಟನೆಯ ನಂತರ ಇಂಫಾಲ್ ಮತ್ತು ಸುತ್ತಮುತ್ತಲಿನ ವಾಯುಮಾರ್ಗವನ್ನು ಮುಚ್ಚಲಾಗಿದೆ. ಪೊಲೀಸರು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಭಾನುವಾರ ಮಧ್ಯಾಹ್ನ 2:30ಕ್ಕೆ ಅಪರಿಚಿತ ಡ್ರೋನ್ ಗಳ ಉಪಸ್ಥಿತಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಭದ್ರತಾ ದೃಷ್ಟಿಯಿಂದ ಏರ್ ಸ್ಟ್ರಿಪ್ ಮುಚ್ಚಲಾಗಿದೆ. ಏರ್ ಸ್ಟ್ರಿಪ್ ಮುಚ್ಚಿದ್ದರಿಂದ ವಿಮಾನ ಸೇವೆಗಳು ಸ್ಥಗಿತಗೊಂಡಿವೆ. ಇಂಫಾಲ್ ಗೆ ಮತ್ತು ಅಲ್ಲಿಂದ ಹೊರಡುವ ಕೆಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಕೆಲವು ಒಳಬರುವ ವಿಮಾನಗಳನ್ನು ಇಂಫಾಲ್ ವಾಯುಪ್ರದೇಶದಿಂದ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಮುಗಲಭೆ ಪೀಡಿತ ಮಣಿಪುರದಲ್ಲಿ ನವೆಂಬರ್ 23 ರವರೆಗೆ ಇಂಟರ್ನೆಟ್ ನಿಷೇಧವನ್ನು ಸರ್ಕಾರ ವಿಸ್ತರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆ ಪ್ರದೇಶದಲ್ಲಿ ತನಿಖೆ ಮುಂದುವರಿದಿದೆ.