ಬೆಂಗಳೂರು: ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಪ್ರಿಯಕರನ ಮನೆ ಮೇಲೇರಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ನಾಲ್ಕೈದು ವರ್ಷಗಳಿಂದ ಯುವಕ ಹಾಗೂ ಯುವತಿ ಪ್ರೀತಿಸುತ್ತಿದ್ದರು.
ಆದರೆ ಇದೀಗ ಯುವಕನು ಯುವತಿಗೆ ಕೈ ಕೊಟ್ಟಿದ್ದರಿಂದ ಬೇಸರಗೊಂಡ ಯುವತಿ, ನೇರವಾಗಿ ಆತನ ಮನೆಗೆ ತೆರಳಿದ್ದಾಳೆ.ಯುವತಿ ಮನೆಗೆ ಬರುತ್ತಿದ್ದಂತೆಯೇ ಯುವಕ ಮನೆಯಿಂದ ಎಸ್ಕೇಪ್ ಆಗಿದ್ದಾನೆ.
ಹೀಗಾಗಿ ಕೈಯಲಿ ಚಾಕು ಹಿಡಿದು ಪ್ರಿಯಕರನ ಮನೆ ಟೆರೇಸ್ ಮೇಲೆ ಯುವತಿ ನಿಂತು ಈಗಲೇ ಪ್ರಿಯಕರನನ್ನು ಇಲ್ಲಿಗೆ ಕರೆಸಿ ಎಂದು ಬೇಡಿಕೆ ಇಟ್ಟಿದ್ದಾಳೆ. ಮನೆಯ ಟೆರೇಸ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾಳೆ.