ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಗೆ ಸೇರಿದ ಸೊರವನಹಳ್ಳಿ ಗ್ರಾಮ ಹಾಗೂ ಸೊರವನಹಳ್ಳಿ ಗೊಲ್ಲರ ಹಟ್ಟಿಯಲ್ಲಿ ಸರಣಿ ಕಳ್ಳತನ ನಡೆಸಲಾಗಿದೆ.
ಬುಧವಾರ ತಡರಾತ್ರಿ ಸುಮಾರು 2 ರಿಂದ ಮೂರು ಗಂಟೆಯ ಸಮಯದಲ್ಲಿ ಕಳ್ಳತನ ನಡೆದಿದ್ದು, ಸೊರವನಹಳ್ಳಿ ಗ್ರಾಮದ ರೈತ ತಮ್ಮಯ್ಯ ನವರಿಗೆ ಸೇರಿದ ಒಂದೇ ಮನೆಯಲ್ಲಿ 20 ಕುರಿಗಳು ಹಾಗೂ ದೊಡ್ದಯ್ಯ ಎಂಬವರಿಗೆ ಸೇರಿದ 5 ಮೇಕೆಗಳು ಮತ್ತು ಸೊರವನಹಳ್ಳಿ ಗೊಲ್ಲರ ಹಟ್ಟಿಯ ಧನಂಜಯ ರವರ ಮನೆಯಲ್ಲಿ 5 ಕುರಿಗಳು ಕಳ್ಳತನವಾಗಿವೆ.
ಈ ಸರಣಿ ಕಳ್ಳತನದ ತಮ್ಮ ಕುರಿ ಮೇಕೆಗಳನ್ನು ಕಳೆದುಕೊಂಡ ಬಡ ರೈತರು ಕಂಗಾಲಾಗಿದ್ದು, ಜೀವನಾಧಾರ ವಾಗಿದ್ದ ಸಾವಿರಾರು ರೂಪಾಯಿಯ ಬೆಲೆ ಬಾಳುವ ಮಾಲುಗಳನ್ನು ಕಳೆದು ಕೊಂಡು, ಬೀದಿಗಿ ಬಿದ್ದಿದ್ದೇವೆ ಎಂದು ಮಾಧ್ಯಮದ ಬಳಿಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ವರದಿ: ಸುರೇಶ್ ಬಾಬು ಎಂ .ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5