ನಗರ ಪೊಲೀಸರು, ಸೋಮವಾರ 7 21 ಕೋಟಿ ಮೌಲ್ಯದ 2, 117 ಕೆ.ಜಿ ಡ್ರಗ್ಸ್ ನಾಶಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಬಿ.ದಯಾನಂದ್, ‘ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದ 2, 053 ಕೆ. ಜಿ ಗಾಂಜಾ, 9 ಕೆ. ಜಿ ಹಶೀಷ್, 12 ಕೆ. ಜಿ ಅಫೀಮು, 9 ಕೆ. ಜಿ ಚರಸ್, 568 ಗ್ರಾಂ ಕೊಕೇನ್, 13 ಗ್ರಾಂ ಹೆರಾಯಿನ್, 5 ಕೆ. ಜಿ ಎಂಡಿಎಂಎ ಅನ್ನು ಕೋರ್ಟ್ ಆದೇಶ ಪಡೆದು ನಾಶಪಡಿಸಲಾಗಿದೆ’ ಎಂದರು.
ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ 2022ರ ಜನವರಿಯಿಂದ 2023ರ ಜೂನ್ ವರೆಗೆ 6, 191 ಪ್ರಕರಣ ದಾಖಲಾಗಿದೆ. ಈ ಸಂಬಂಧ 7, 723 ಭಾರತೀಯರು, 159 ವಿದೇಶಿಯರನ್ನು ಬಂಧಿಸಿದ್ದು, 7 117 ಕೋಟಿ ಮೌಲ್ಯದ 6, 261 ಕೆ. ಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಡ್ರಗ್ಸ್ ಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ’ ಕುರಿತು ಸಮಾವೇಶದ ಭಾಗವಾಗಿ 7 92 ಕೋಟಿ ಮೌಲ್ಯದ 4, 397 ಕೆ. ಜಿ ಡ್ರಗ್ಸ್ ನಾಶಪಡಿಸಲಾಗಿತ್ತು’ ಎಂದು ದಯಾನಂದ್ ಅವರು ಸ್ಮರಿಸಿದರು.
ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ: ‘ನಗರದ ಶಾಲೆ- ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸಲಿದ್ದು, ಈವರೆಗೆ 1. 95 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಡ್ರಗ್ಸ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದ್ದಾರೆ’ ಎಂದರು. ರಾಜ್ಯದ 100 ಪೊಲೀಸ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


