ಕೊರಟಗೆರೆ: ರಾಜ್ಯದಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲ ಆವರಿಸಿರುವುದರಿಂದ ರಾಜ್ಯದ 21 ತಾಲೂಕುಗಳನ್ನ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕನ್ನು ಬರಪೀಡಿ ತಾಲೂಕು ಎಂದು ಘೋಷಣೆ ಮಾಡಲಾಗಿದೆ.
ಜಾನುವಾರುಗಳಿಗೆ ಮೇವು ಇಲ್ಲದ ಕಾರಣ ಅವುಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಾಪಟ್ಟಣ ಗ್ರಾಮದ ದೊಡ್ಡಮ್ಮ ದೇವಿ ದೇವಸ್ಥಾನದ ಸಮುದಾಯದ ಆವರಣದಲ್ಲಿ ಜಾನುವಾರುಗಳಿಗೆ ಮೇವು ಬ್ಯಾಂಕ್ ತೆರೆಯಲು ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಕೊರಟಗೆರೆಯ ತಹಶೀಲ್ದಾರ್ ಮಂಜುನಾಥ್ ಸ್ಥಳ ಪರಿಶೀಲಿಸಿ ಗುರುತಿಸಿದ್ದು, ಎಲ್ಲಾ ಹೋಬಳಿಗಳ ಅವಶ್ಯಕತೆ ಇರುವ ಸ್ಥಳಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಎಲ್ಲಾ ಕೇಂದ್ರಗಳಲ್ಲಿ ಶೀಘ್ರವಾಗಿ ಮೇವು ಬ್ಯಾಂಕ್ ತೆರೆಯಲಾಗುವುದು.
ರೈತರು ಪಶು ಇಲಾಖೆ ವತಿಯಿಂದ ಮೇವು ವಿತರಣಾ ಕಾರ್ಡನ್ನು ಪಡೆದು ಮೇವು ತೆಗೆದುಕೊಂಡು ಹೋಗಬಹುದು. ಒಂದು ಜಾನುವಾರಿಗೆ ಒಂದು ದಿನಕ್ಕೆ 6 ಕೆ.ಜಿ. ಮೇವನ್ನು ವಿತರಿಸಲಾಗುವುದು
ರೈತರು ದಾಖಲೆಗಳೊಂದಿಗೆ ಬಂದು ಒಂದು ಕೆ.ಜಿ. ಮೇವಿಗೆ 2 ರೂ.ಗಳಂತೆ ಹಣವನ್ನು ಪಾವತಿಸಿ, ಒಂದು ವಾರಕ್ಕೆ ಆಗುವಷ್ಟು ಮೇವನ್ನು ನಾಳೆಯಿಂದಲೇ ತೆಗೆದುಕೊಂಡು ಹೋಗಬಹುದು ಎಂದು ಕೊರಟಗೆರೆ ತಾಲೂಕು ದಂಡಾಧಿಕಾರಿಗಳಾದ ಮಂಜುನಾಥ್ ಹಾಗೂ ಪಶು ಇಲಾಖೆ ಅಧಿಕಾರಿ ರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296