ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಮೇಗಳಪಾಳ್ಯ ತಾಂಡದಲ್ಲಿ ಸಂತ ಸೇವಾಲಾಲ್ ಮಹರಾಜ್ ರವರ 285ನೇ ಜಯಂತೋತ್ಸವವನ್ನು ಲಂಬಾಣಿ ಸಮುದಾಯ ವಿಜೃಂಭಣೆಯಿಂದ ಆಚರಿಸಿತು.
ಬೆಳಿಗ್ಗೆ ವಿಶೇಷ ಪೂಜೆ ನೆರವೇರಿದ ನಂತರ ಸಮುದಾಯದ ಹಿರಿಯರು ಸೇರಿ ಅಗ್ನಿಕುಂಡಕ್ಕೆ ವಿವಿಧ ವಸ್ತುಗಳನ್ನು ಸಮರ್ಪಿಸುವ ಮೂಲಕ ಬೋಗ್ ಆಚರಣೆ ನೆರವೇರಿಸಿದರು. ಗ್ರಾಮದ ಹೊರವಲಯದಲ್ಲಿರುವ ಆಂಜನೇಯಸ್ವಾಮಿ ದೇವಾಲಯಕ್ಕೆ ತಂಬಿಟ್ಟು ಜ್ಯೋತಿಗಳೊಂದಿಗೆ ಮೆರವಣಿಗೆ ಸಾಗಿದ ಮಹಿಳೆಯರು ಆರತಿ ಬೆಳಗಿದರು.
ಸಂತ ಸೇವಾಲಾಲ್ ರ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ನೃತ್ಯ ಮಾಡಿದರೆ ಯುವಜನತೆ ವಾದ್ಯಗಳ ತಾಳಕ್ಕೆ ತಕ್ಕಂತೆ ಕುಣಿದು ಸಂತಸ ಹಂಚಿಕೊಂಡರು.
ವರದಿ: ನಂದೀಶ್, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


