ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಮೈಚಾಂಗ್ ಚಂಡಮಾರುತದೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಅಲ್ಲದೇ ಈಶಾನ್ಯ ಮಾನ್ಸೂನ್ ಜೊತೆಗೆ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಕರ್ನಾಟಕದಿಂದ 3,250-3,300 ಕ್ಯೂಸೆಕ್ ನಷ್ಟು ಕಾವೇರಿ ನೀರನ್ನು ಹರಿಸಲಾಗುತ್ತಿದೆ.
ಕಾವೇರಿ ನೀರು ಬಿಡುವ ಕುರಿತು ತೀವ್ರ ವಿರೋಧ ವ್ಯಕ್ತವಾಗಿದ್ದರೂ ಉತ್ತಮ ಮಳೆಯಿಂದಾಗಿ ತಮಿಳುನಾಡಿಗೆ ನಿತ್ಯ 3,250-3,300 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳು ಹೇಳುವಂತೆ ಇದನ್ನು ಕಬಿನಿ ಅಥವಾ ಕೆಆರ್ಎಸ್ ಅಣೆಕಟ್ಟುಗಳಿಂದ ಹರಿಸಲಾಗುತ್ತಿಲ್ಲ. ಆದರೆ ಕೆಆರ್ಎಸ್ ಮತ್ತು ಕಬಿನಿ ನಡುವಿನ ವಲಯದಲ್ಲಿ ಬಿಳಿಗುಂಡ್ಲುವಿಗೆ ಹೆಚ್ಚುವರಿ ನೀರು ಹರಿಯುತ್ತಿದೆ. ಅಕ್ಟೋಬರ್ 1 ರಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಸುಮಾರು 200 ಮಿ. ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ತಿಳಿಸಿದೆ.


