ಸ್ಟಾರ್ ನಟ ಕಮಲ್ ಹಾಸನ್ ಮತ್ತು ಸ್ಟಾರ್ ನಿರ್ದೇಶಕ ಮಣಿರತ್ನಂ ಹೊಸ ಚಿತ್ರದ ಘೋಷಣೆ ಮಾಡುವ ಮೂಲಕ 35 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ.
ಕಮಲ್ ಹಾಸನ್ ಜನ್ಮದಿನದ ಅಂಗವಾಗಿ ಒಂದು ದಿನ ಮುಂಚಿತವಾಗಿಯೇ ಹೊಸ ಚಿತ್ರದ ಘೋಷಣೆ ಮಾಡಲಾಗಿದ್ದು, ಕೆಎಚ್234 ಎಂದು ಹೆಸರಿಡಲಾಗಿದ್ದು, ಅಧಿಕೃತವಾಗಿ ಚಿತ್ರದ ಹೆಸರನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.
2024ರಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ವಿಕ್ರಂ ಚಿತ್ರದ ನಂತರ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಪ್ರಸ್ತುತ ಅವರು ಶಂಕರ್ ಜೊತೆ ಇಂಡಿಯನ್-2 ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
1987ರಲ್ಲಿ ಕಮಲ್ ಹಾಸನ್ ಮತ್ತು ಮಣಿರತ್ನಂ ಜೊತೆಯಾಗಿ ಮಾಡಿದ್ದ ಚಿತ್ರ ದಾಖಲೆ ಮಾಡಿತ್ತು. ಇದೀಗ 35 ವರ್ಷಗಳ ನಂತರ ಈ ಜೋಡಿ ಒಂದಾಗಿದ್ದು, ನಾಯಗನ್-2 ಆಗಿರುತ್ತೋ ಅಥವಾ ಹೊಸ ಚಿತ್ರವೋ ಎಂಬ ಕುತೂಹಲ ಇದೆ.
ಪೊನ್ನಿಯನ್ ಸೆಲ್ವಂ-1 ಯಶಸ್ಸಿನಿಂದ ಬೀಗುತ್ತಿರುವ ಮಣಿರತ್ನಂ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದು, ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy