ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಜಾರಿಗೆ ಮುನ್ನವೇ ಮೇ ತಿಂಗಳಲ್ಲಿ ಟಿಕೆಟ್ ಇಲ್ಲದೇ ಓಡಾಡಿದ 3 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನಿಖಾ ತಂಡಗಳು ತಪಾಸಣಾ ಕಾರ್ಯ ಚುರುಕುಗೊಳಿಸಿದ್ದರು. ಅಧಿಕಾರಿಗಳ ತಂಡ ಆ ತಿಂಗಳಲ್ಲಿ ಒಟ್ಟು 44, 052 ಸಾರಿಗೆ ಬಸ್ ಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಅದರಿಂದ ಒಟ್ಟು ನಿಗಮದ ಆದಾಯಕ್ಕೆ ಉಂಟಾಗುತ್ತಿದ್ದ 73, 859 ರೂಪಾಯಿ ನಷ್ಟವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ.
ಇನ್ನೂ ಪತ್ತೆಯಾದ ಟಿಕೆಟ್ ರಹಿತ ಒಟ್ಟು 3636 ಪ್ರಕರಣಗಳಿಂದ ಅಧಿಕಾರಿಗಳು ಒಟ್ಟು 5, 89, 453 ರೂಪಾಯಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಮೂಲಕ ತಿಳಿಸಿದೆ. ಇದೊಂದಿಗೆ ಸಾರ್ವಜನಿಕರು, ಪ್ರಯಾಣಿಕರು ಬಸ್ ಗಳಲ್ಲಿ ಸಂಚರಿಸುವಾಗ ದಯಮಾಡಿ ಟಿಕೆಟ್ ಪಡೆದು ಚಲಾಯಿಸಬೇಕು ಎಂದು ತಿಳಿಸಿದೆ.
ಇದು ಪುರುಷರಿಗೆ ಅನ್ವಯವಾಗಲಿದೆ. ಏಕೆಂದರೆ ಜೂನ್ 11ರಂದು ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


