ತುಮಕೂರು: ತುಮಕೂರಿನ ಶ್ರೀ ರಂಗರಂಗ ಹವ್ಯಾಸಿ ಕಲಾವೃಂದ ಟ್ರಸ್ಟ್, ತನ್ನ 39ನೇ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವವನ್ನು “ಚಿಲಿಪಿಲಿ!?” ಶೀರ್ಷಿಕೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ನ.12 ಮತ್ತು 13 ನವೆಂಬರ್ 2025ರ ಸಂಜೆ 4-00 ಗಂಟೆಯಿಂದ 7-30 ಗಂಟೆವರೆಗೆ ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ.
1987ರಲ್ಲಿ ರಿಚರ್ಡ್ ಜಿ. ಲೂಯಿಸ್ ಅವರ ಮಾರ್ಗದರ್ಶದಲ್ಲಿ ಆರಂಭವಾಗಿ ನವೆಂಬರ್ 12 ಮತ್ತು 13 ರಂದು ರಂಗಶಕ್ತಿ ರಿಚರ್ಡ್ ಜಿ. ಲೂಯಿಸ್ ಅವರಿಂದ ಉದ್ಘಾಟನೆಯಾಗುತ್ತಿದೆ. ಅಧ್ಯಕ್ಷತೆಯನ್ನು ಕಲಾವೃಂದದ ಬೆನ್ನೆಲುಬಾಗಿರುವ ಪತ್ರಿಕಾ ಕ್ಷೇತ್ರದ ಡಾ.ಎಸ್.ನಾಗಣ್ಣನವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದ ರೂವಾರಿ ಡಾ. ಲ್ಯಾನ್ಸಿ ಹೆಚ್. ಪಾಯಸ್ ಆಗಮಿಸುವರು.
ಜೊತೆಯಲ್ಲಿ ಬೆಂಗಳೂರಿನ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಮಾಲಿನಿ ಎಸ್., ತುಮಕೂರು ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಪಂಚಾಯತ್ ನ ಲೆಕ್ಕ ಪರಿಶೋಧಕರು, ಕಲಾವಿದರೂ ಆಗಿರುವ ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಕೆ.ಮಿರ್ಜಿ, ಬೆಂಗಳೂರಿನ ರಾಜ್ಯ ಕ್ರೀಡಾ ಕಾರ್ಯದರ್ಶಿಗಳಾಗಿರುವ ಕೆ.ವಿ.ಮೋಹನ್ ಕುಮಾರ್ ಮತ್ತು ಮೊದಲಿನಿಂದಲೂ ಕಲಾವೃಂದದ ಜೊತೆಯಾಗಿರುವ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್, ಜಿಲ್ಲಾಧ್ಯಕ್ಷರು, ರಾಜ್ಯ ಇಂಜಿನಿಯರ್ ಸೇವಾ ಸಂಘದ ಜಿ.ಎನ್. ರಾಧಾಕೃಷ್ಣರವರು ಭಾಗವಹಿಸುವರು.
ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬೆಂಗಳೂರಿನ ಅಂತರರಾಷ್ಟ್ರ ಖ್ಯಾತ ಹಾಸ್ಯ ಕಲಾವಿದರಾದ ರಿಚರ್ಡ್ ಜಿ. ಲೂಯಿಸ್ ಮತ್ತು ತಂಡದವರಿಂದ ಹಾಸ್ಯಮಿತ ರಂಗಗೀತೆಗಳ ಕಾರ್ಯಕ್ರಮವನ್ನು 12–11–2025 ಸಂಜೆ 4 ಗಂಟೆಗೆ ಏರ್ಪಡಿಸಿದೆ. ಅಂದು ಬೆಂಗಳೂರಿನ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸಂಜೆ 5:30 ಗಂಟೆಗೆ ಉನ್ನಿಕೃಷ್ಣನ್ ಅವರು ಪ್ರಸ್ತುತಪಡಿಸುವ ಡಾ.ಆರ್.ವಿ.ಭಂಡಾರಿ ರಚಿತ, ಈರಪ್ಪ ಮಹಾಲಿಂಗಪೂರ ನಿರ್ದೇಶನದಲ್ಲಿ ಅಭಿನಯಿಸುವ ನಾಟಕ “ಬೆಳಕು ಹಂಚಿದ ಬಾಲಕ”, ಮತ್ತು 6:30 ಗಂಟೆಗೆ ಅಕ್ಷತ ಸಿ. ಅವರು ಪ್ರಸ್ತುತ ಪಡಿಸುವ ಡಾ.ಶ್ರೀಪಾದ ಭಟ್ ಅವರ ಆರ್. ದಿವ್ಯ ನಿರ್ದೇಶನದಲ್ಲಿ “ಬಲಿ” ನಾಟಕಗಳು ಪ್ರಯೋಗಿಸಲ್ಪಡುತ್ತಿವೆ.
13—11–2025 ರಂದು ಸಂಜೆ 5:30 ಗಂಟೆಗೆ ಸವಿತಾ, ಶ್ರೀರಂಗರಂಗ ಹವ್ಯಾಸಿ ಕಲಾವೃಂದದ ಮಕ್ಕಳ ತಂಡ ಪ್ರಸ್ತುತ ಪಡಿಸುವ ಆರ್.ಕೆ.ಶಿವಕುಮಾರ್ ರಚನೆಯ ಹೆಚ್.ಎಂ. ರಂಗಯ್ಯ ನಿರ್ದೇಶನದ “ಪ್ರೀತಿಯ ಕಾಳು” ನಾಟಕವು, ಸಂಜೆ 6:30 ಗಂಟೆಗೆ ಕಾರವಾರ ಜಿಲ್ಲೆಯ ಶಿರಸಿಯ ರಂಗಚಿತ್ರದ ಅಖಿಲೇಶ್ ಪ್ರಸ್ತುತ ಪಡಿಸುವ ಹೆಚ್.ಎಸ್. ವೆಂಕಟೇಶ್ ಮೂರ್ತಿ ಅವರ ಆರ್.ಕೆ.ಶಿವಕುಮಾರ್ ನಿರ್ದೇಶನದಲ್ಲಿ “ಕಂಸಾಯಣ” ನಾಟಕವು ಪ್ರಯೋಗಿಸಲ್ಪಡುತ್ತಿದೆ.
ಅಂದು ಸಂಜೆ 4 ಗಂಟೆಗೆ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಜಿ.ವೆಂಕಟೇಶಲು ಮಾತನಾಡುವುದರು, ಮುಖ್ಯ ಅತಿಥಿಗಳಾಗಿ ಸಿರಾ ತಾಲ್ಲೂಕಿನ ಚಿಕ್ಕನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಜಗದೀಶ ಕಣಕಾಲ, ಅಧ್ಯಾಪಕ ಈರಪ್ಪ ಮಹಾಲಿಂಗಪೂರ, ಹೆಚ್.ಎಂ.ರಂಗಯ್ಯ ಆರ್.ಕೆ. ಶಿವಕುಮಾರ್ ಮತ್ತು ಶ್ರೀರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು, ತುಮಕೂರು ನಗರದ ಸಾರ್ವಜನಿಕ ಬಂಧುಗಳು, ಕಲಾಪೋಷಕರು, ತಮ್ಮ ಮಕ್ಕಳಿಗೆ ಸದರಿ ನಾಟಕಗಳನ್ನು ತೋರಿಸುವುದರ ಮೂಲಕ ಮಕ್ಕಳ ಕಲಾಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


