ಉತ್ತರ ಪ್ರದೇಶ: ಶಾಸಕರೊಬ್ಬರ ಕಾರು ಡಿಕ್ಕಿ ಹೊಡೆದ ಪರಿಣಾಮ 4 ವರ್ಷದ ಬಾಲಕಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ದಯಾರಾಮ ಪೂರ್ವ ಪಹಾಡಾಪುರ ಬಳಿ ನಡೆದಿದೆ.
ಕತ್ರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬವನ್ ಸಿಂಗ್ ಅವರಿಗೆ ಸೇರಿದ ಕಾರು ಅಪಘಾತಕ್ಕೆ ಕಾರಣವಾದ ಕಾರು ಎಂದು ತಿಳಿದು ಬಂದಿದೆ.
ರಾಜೇಶ್ ಕುಮಾರ್ ಯಾದವ್ ಎಂಬವರ ನಾಲ್ಕು ವರ್ಷದ ಪುತ್ರಿ ಅಪಘಾತದಲ್ಲಿ ಮೃತಪಟ್ಟವರು. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ವೇಳೆ ಕಾರಿನಲ್ಲಿ ಶಾಸಕರು ಪ್ರಯಾಣಿಸುತ್ತಿರಲಿಲ್ಲ. ಚಾಲಕ ಮತ್ತು ಶಾಸಕರ ಕುಟುಂಬ ಸದಸ್ಯರೊಬ್ಬರು ಕಾರಲ್ಲಿ ತೆರಳುವಾಗ ಘಟನೆ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4