ಕೊರಟಗೆರೆ: ಪಟ್ಟಣದ ಕೆಪಿಟಿಸಿಲ್ ಕಾಲೋನಿಯಲ್ಲಿ ಬೆಸ್ಕಾಂ ಇಲಾಖೆ ವತಿಯಿಂದ ಆಯೋಜಿಸಲಾದ 48ನೇ ವರ್ಷದ ವಿದ್ಯುತ್ ಗಣಪತಿ ವಿಸರ್ಜನಾ ಕಾರ್ಯಕ್ರಮವು ಇಲಾಖೆಯ ಎಇಇ ಪ್ರಸನ್ನಕುಮಾರ್ ಅನುಪಸ್ಥಿತಿ ಮತ್ತು ಬೆಸ್ಕಾಂ ನೌಕರರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ಯಶಸ್ವಿಗೊಂಡಿತ್ತು.
ಬೆಸ್ಕಾಂ ನೌಕರರ ಸಂಘ ಅಧ್ಯಕ್ಷ ಎಚ್.ಕೃಷ್ಣಮೂರ್ತಿ ಮಾತನಾಡಿ, 48 ವರ್ಷಗಳಿಂದ ಉತ್ತಮ ಮಟ್ಟದಲ್ಲಿ ವಿದ್ಯುತ್ ಗಣಪತಿಯ ವಿಸರ್ಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ತಾಲ್ಲೂಕಿನ ಬೆಸ್ಕಾಂ ಎಲ್ಲಾ ಶಾಖೆಯ ಸಿಬ್ಬಂದಿಗಳಿಂದ ವಿಜೃಂಭಣೆಯ ಆಚರಣೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ನಟರಾಜು ಕೆ.ವಿ ಮಾತನಾಡಿ, 1976ರಲ್ಲಿ ಎಇಇ ಪುಟ್ಟಶಾಮಯ್ಯನವರು ಮೊದಲಿಗೆ ಸ್ಥಾಪಿಸಿದ್ದು, 2 ವರ್ಷದ ನಂತರ ವಿದ್ಯುತ್ ಗಣಪತಿ ದೇವಾಲಯ ನಿರ್ಮಾಣಗೊಂಡಿತ್ತು. 48 ವರ್ಷಗಳ ಕಾಲ ನಿರಂತರ ಪೂಜೆ ನಡೆದುಕೊಂಡು ಬಂದಿದೆ. ನಗರದ ವಿದ್ಯುತ್ ಗ್ರಾಹಕರಿಗೆ ಮತ್ತು ನೌಕರರಿಗೆ ವಿದ್ಯುತ್ ಸುರಕ್ಷತೆ ನೀಡಿ ಗಣಪತಿಯು ಕಾಪಾಡಿಕೊಂಡು ಹೋಗುತ್ತಿದೆ. ವಿಶಿಷ್ಠ ರೀತಿಯಲ್ಲಿ ಗೌರಿ–ಗಣೇಶ ಹಬ್ಬವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಕಿರಿಯ ಇಂಜಿನಿಯರ್ ಹೆಚ್.ಸಿ ಮಲ್ಲಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ವಿದ್ಯುತ್ ಗಣಪತಿ ಆಚರಣೆ ವಿಶೇಷ. ಪ್ರತಿವರ್ಷ ಗೌರಿ–ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿದ ಗಣಪತಿಗೆ ವಿಶೇಷ ಪೂಜೆಗಳು ಜರುಗಲಿವೆ. ಈ ವೇಳೆ ಅನ್ನಸಂತರ್ಪಣೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.
ತಾಂತ್ರಿಕ ಸಹಾಯಕ ಇಂಜಿನಿಯರ್ ಸುಹಾಸ್ ಎಚ್.ಡಿ ಮಾತನಾಡಿ, ಪ್ರತಿವರ್ಷ ಗೌರಿ ಗಣೇಶ ಹಬ್ಬದ ಅಂಗವಾಗಿ ವಿದ್ಯುತ್ ಗಣಪತಿ ದೇವಾಲಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬಂದಿದೆ. ಸುಸಜ್ಜಿತವಾಗಿ ಕಾರ್ಯಕ್ರಮ ಪೂರ್ಣಗೊಳಿಸಲು ಸಾರ್ವಜನಿಕರು ಹೆಚ್ಚಿನ ಸಂಖೈಯಲ್ಲಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆ ಕ್ಯಾಶಿಯರ್ ರಾಘವೇಂದ್ರ ಜಿ.ಡಿ., ತಾಲ್ಲೂಕಿನ ಎಲ್ಲಾ ಶಾಖೆಯ ಬೆಸ್ಕಾಂ ನೌಕರರು ಮತ್ತು ಸಂಘ–ಸಂಸ್ಥೆಗಳ ಮುಖಂಡರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC