ಈಗ ವಿದ್ಯುತ್ ಮೀಟರ್‌ಗಳು ಹೆಚ್ಚು ಸುಧಾರಿತವಾಗಲಿವೆ. 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್ ಗಳು ಬಂದಿವೆ. 4G ಮೀಟರ್‌ಗಳು ಈಗ ಬಳಸುತ್ತಿರುವ ಮೀಟರ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಕೆಲವು ರಾಜ್ಯಗಳು ಈಗಾಗಲೇ ಈ ಮೀಟರ್ ಅನ್ನು ಅಳವಡಿಸುವ ತಯಾರಿ ಪೂರ್ಣಗೊಳಿಸಿವೆ. ಹೌದು, ಜುಲೈ ತಿಂಗಳಿನಿಂದ ಉತ್ತರ ಪ್ರದೇಶದಲ್ಲಿ 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲಾಗುವುದು.
4G ಮೀಟರ್ ಅಳವಡಿಕೆ ಹೇಗೆ ?
ಹಳೆಯ ವಿದ್ಯುತ್ ಮೀಟರ್‌ಗಳನ್ನು ಯಾವ ಮನೆಗೆ ಹಾಕಲಾಗಿದೆಯೋ ಆ ಮೀಟರ್ ಗಳನ್ನೂ ಹೊಸ 4G ಮೀಟರ್‌ಗಳೊಂದಿಗೆ ಅಪ್ಡೇಟ್ ಮಾಡಲಾಗುವುದು. ಈಗಿರುವ ಮೀಟರ್ ಅಥವಾ ಹಳೆಯ ತಂತ್ರಜ್ಞಾನ ಮೀಟರ್ ಗಳನ್ನು ಸ್ಮಾರ್ಟ್ ಮೀಟರ್ ಗಳನ್ನಾಗಿ ಪರಿವರ್ತಿಸಲಾಗುವುದು.
ಹೇಗೆ ಕಾರ್ಯ ನಿರ್ವಹಿಸುತ್ತದೆ 4G ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್ ?
4G ಪ್ರಿಪೇಯ್ಡ್ ಮೀಟರ್ ನಿಖರವಾಗಿ SIM ಕಾರ್ಡ್‌ನ ಪೋಸ್ಟ್‌ಪೇಯ್ಡ್ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತದೆ. 4G ಮೀಟರ್ ಅನ್ನು ಅಳವಡಿಸಿದ ನಂತರ, ನಿಗದಿತ ಸಾಮರ್ಥ್ಯದ ಪ್ಲಾನ್ ರೀಚಾರ್ಜ್ ಮಾಡಬೇಕಾಗುತ್ತದೆ. ಇದರ ಆಧಾರದ ಮೇಲೆ ನಿಗದಿತ ಅವಧಿಗೆ ಸ್ಥಿರ ಯೂನಿಟ್ ಗಳನ್ನು ಪಡೆಯಬಹುದು. ಈ ಮೂಲಕ ವಿದ್ಯುತ್ ಬಿಲ್ ಕಟ್ಟುವ ಜಂಜಾಟದಿಂದ ಮುಕ್ತಿ ಸಿಗಲಿದೆ.
4G ಮೀಟರ್ ಪ್ರಯೋಜನ :
1. 4G ಮೀಟರ್‌ಗಳನ್ನು ಅಳವಡಿಸಸಿದ ನಂತರ ವಿದ್ಯುತ್ ಬಿಲ್ ಅನ್ನು ನಿಗದಿತ ಸಮಯಕ್ಕೆ ಪಾವತಿಸಬೇಕಾಗುತ್ತದೆ.
2. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ರೀಚಾರ್ಜ್ ಮಾಡಲು ಸಾಧ್ಯವಾಗುತ್ತದೆ.
3. ವಿದ್ಯುತ್ ಕಳ್ಳತನದ ಸಮಸ್ಯೆಗೆ ಕಡಿವಾಣ ಬೀಳಲಿದೆ.
4. ವಿದ್ಯುತ್ ಮೀಟರ್ ಟ್ಯಾಂಪರಿಂಗ್ ಗೆ ಅವಕಾಶ ಇರುವುದಿಲ್ಲ.
ಗ್ರಾಹಕ ಮಂಡಳಿ ಆಗ್ರಹ :
ಗ್ರಾಹಕ ಕೌನ್ಸಿಲ್‌ನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಯುಪಿ ಪವರ್ ಕಾರ್ಪೊರೇಷನ್ ಮತ್ತು ಕೇಂದ್ರ ವಿದ್ಯುತ್ ಸಚಿವಾಲಯವು ಸ್ಮಾರ್ಟ್ 4ಜಿ ಪ್ರಿಪೇಯ್ಡ್ ಮೀಟರ್‌ಗಳನ್ನು ಸ್ಥಾಪಿಸಲು ಹಸಿರು ನಿಶಾನೆ ತೋರಿದೆ. ಮುಂದಿನ ತಿಂಗಳಿನಿಂದ ಉತ್ತರ ಪ್ರದೇಶದಲ್ಲಿ 4ಜಿ ಮೀಟರ್‌ಗಳನ್ನು ಅಳವಡಿಸಲಾಗುವುದು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5