ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸುತ್ತಿರುವ ಸೆಮಿ ಸ್ಪೀಡ್ ವಂದೇ ಭಾರತ್ ರೈಲು ಮತ್ತೆ ಜಾನುವಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ಸಂಭವಿಸಿದೆ. ಉದ್ಘಾಟನೆಗೊಂಡ ನಂತರ ವರದಿಯಾಗುತ್ತಿರುವ ನಾಲ್ಕನೇ ಪ್ರಕರಣ ಇದಾಗಿದೆ.
ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ ಎರಡು ತಿಂಗಳಲ್ಲಿ ಇದು ನಾಲ್ಕನೇ ಪ್ರಕರಣವಾಗಿದ್ದು, ಅಪಘಾತದಲ್ಲಿ ರೈಲಿನ ಮುಂಭಾಗದಲ್ಲಿ ಸ್ವಲ್ಪಭಾಗ ಹಾನಿಯಾಗಿದೆ. ಅಪಘಾತ ಸಂಭವಿಸಿದ ಕೆಲವು ನಿಮಿಷಗಳ ನಂತರ ರೈಲು ಮತ್ತೆ ಸಂಚಾರ ಆರಂಭಿಸಿದೆ.
ಉದ್ವಾಡಾ ಮತ್ತು ವಾಪಿ ನಡುವಿನ ಕ್ರಾಸಿಂಗ್ ಗೇಟ್ 87ರ ಬಳಿ ಗುರುವಾರ ಸಂಜೆ 6.23ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ರೈಲಿನ ಮುಂಭಾಗ ಸ್ವಲ್ಪ ನಜ್ಜುಗುಜ್ಜಾಗಿದ್ದು, ರಾತ್ರಿ ಸರಿಪಡಿಸಲಾಗುವುದು. 635ರ ಸುಮಾರಿಗೆ ಮತ್ತೆ ರೈಲು ಸಂಚಾರ ಆರಂಭಿಸಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


