5 ಅಂತಸ್ತಿನ ವಸತಿ ಸಂಕೀರ್ಣ ಕುಸಿದ ಪರಿಣಾಮ 9 ಮಂದಿ ಮೃತಪಟ್ಟು ಒಬ್ಬರು ನಾಪತ್ತೆಯಾಗಿರುವ ಘಟನೆ ರಷ್ಯಾದ ಫೆಸಿಫಿಕ್ ದ್ವೀಪ ಸಕಲೇನ್ ನಲ್ಲಿ ಸಂಭವಿಸಿದೆ.
ಗ್ಯಾಸ್ ಸ್ಫೋಟದಿಂದ ಕಟ್ಟಡ ಕುಸಿದಿದೆ ಎಂದು ಹೇಳಲಾಗಿದ್ದು, ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. 9 ಮೃತದೇಹಗಳು ಪತ್ತೆಯಾಗಿದ್ದು, ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
20 ಲೀಟರ್ ಅಡುಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಈ ಕಟ್ಟಡದ ವಸತಿಗಳಿಗೆ ಕಲ್ಪಿಸಲಾಗಿತ್ತು. ಸಿಲಿಂಡರ್ ಸ್ಫೋಟದಿಂದ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy