2023ರ ಸಾರ್ವತ್ರಿಕ ಚುನಾವಣೆ ಹಲವು ವಿಶೇಷತೆಗಳಿಂದ ಕೂಡಿದ್ದು ರಾಜಕೀಯ ರಂಗ ಆಟದ ಹಾಗೂ ವೈಯಕ್ತಿಕ ಪ್ರತಿಷ್ಠೆ ಅಕಾಡ ಆಗಿ ಪರಿವರ್ತನೆಯಾಗಿದೆ.
ಬೆಳಗಾವಿ 18 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಚರ್ಚೆ ಹಾಗೂ ರಾಜಕೀಯ ಬೆಳವಣಿಗೆ ನಡೆಯುತ್ತಿರುವ ಕ್ಷೇತ್ರವೆಂದರೆ ಬೆಳಗಾವಿ ಗ್ರಾಮೀಣ ಕ್ಷೇತ್ರ.ಇಲ್ಲಿ ತ್ರಿಕೋನ ಸ್ಪರ್ಧೆ ನಿರ್ಮಾಣವಾಗಿದೆ. ಗ್ರಾಮೀಣ ಶಾಸಕ ಮಹಿಳಾ ಶಕ್ತಿಯನ್ನು ತಮ್ಮದಾಗಿಸಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚಾರದಲ್ಲಿ ತೊಡಗಿದ್ದಾರೆ.ಯಾವುದೇ ಕಾಂಟ್ರವರ್ಸಿಗೆ ಕೇರ್ ಅನ್ನದೆ ಚುನಾವಣೆಯಲ್ಲಿ ಗೆಲ್ಲುವುದೇ ಒಂದೇ ಗುರಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ನಿಶ್ಚಯಿಸಿದಂತೆ ಕಾಣುತ್ತಿದೆ.
ಯಾರೇ ಏನೇ ಗಿಮಿಕ್ ಮಾಡಿದರು 50,000ಗಳ ಅಂತರದಿಂದ ಗೆಲವು ನನ್ನದೇ ಎಂಬುದು ಆತ್ಮವಿಶ್ವಾಸ ಅವರಿಗಾಗಿದೆ.
ಈ ಕಡೆ ಕುಟುಂಬದ ಸದಸ್ಯರುಗಳಾದ ವಿಧಾನಪರಿಷತ್ ಸದಸ್ಯರು ಚನ್ನರಾಜ ಹಟ್ಟಿಹಳಿ ರುನಾಲ್ ಹೆಬ್ಬಾಳ್ಕರ್ ಅಪಾರ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ಸಿನ ಕಾರ್ಯಕರ್ತರು ಗ್ರಾಮೀಣ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ಮಯ ಮಾಡಲು ಪಣತೊಟ್ಟಂತೆ ಕಾಣುತ್ತಿದೆ. ಏನೇ ಆದರೂ ಮೇ 13 ರಂದು ಯಾರತ್ತ ಜಯ ಸಿಗಲಿದೆ ಅನ್ನೋದು ಕಾದು ನೋಡಬೇಕಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


