ನಮ್ಮತುಮಕೂರು: ಜಿಲ್ಲೆಯಲ್ಲಿ 19,000 ಪಡಿತರ ಚೀಟಿಗಳು ಆಕ್ಟೀವ್ ಆಗಿಲ್ಲ, ಇನ್ನು 50 ಸಾವಿರ ಕಾರ್ಡ್ ದಾರರು ಬ್ಯಾಂಕ್ ಖಾತೆಯನ್ನೆ ಹೊಂದಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳನ್ನು ಆಕ್ಟೀವ್ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಅನ್ನ ಭಾಗ್ಯ ಯೋಜನೆಗೆ 30 ಕೋಟಿ ಹಣ ಬಿಡುಗಡೆ ಆಗಿದ್ದು ಅನ್ನಭಾಗ್ಯ ಯೋಜನೆ ಯಶಸ್ವಿಗೆ ಜಿಲ್ಲಾಢಳಿತ ಅವಿರತ ಪ್ರಯತ್ನ ನಡೆಸಲಾಗಿದೆ ಎಂದರು.
ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ವಿಚಾರ. ತುಮಕೂರು ಜಿಲ್ಲೆಯಲ್ಲಿ 6,61,625 ಪಡಿತರ ಚೀಟಿಗಳಿವೆ. ಇದರಲ್ಲಿ 5,29,000 ಫಲನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದರು.
ನೇರ ಹಣ ಪಾವತಿ ಮೂಲಕ(DBT) ಖಾತೆಗಳಿಗೆ ಹಣವನ್ನು ಎರಡು ಮೂರು ದಿನಗಳಲ್ಲಿ ಜಮೆ ಮಾಡಲಾಗುವುದು. ಗ್ರಾಮದ ಅಂಚೆ ಇಲಾಖೆಯಲ್ಲೇ ಬ್ಯಾಂಕ್ ಖಾತೆ ತೆರೆಯಲು ಯೋಜನೆ ರೂಪಿಸಿದ್ದೇವೆ ಎಂದರು.
ಪಡಿತರ ಅಂಗಡಿಯಲ್ಲಿ ಸಾರಯುಕ್ತ ಮಿಶ್ರಿತ ಅಕ್ಕಿ ವಿತರಣೆ: ಗೊಂದಲ
ಪಡಿತರ ಅಂಗಡಿಗಳಲ್ಲಿ ನೀಡಲಾಗುತ್ತಿರುವ ಸಾರಯುಕ್ತ ಮಿಶ್ರಿತ ಅಕ್ಕಿಯ ಕುರಿತು ಜನರಲ್ಲಿ ಸಾಕಷ್ಟು ಗೊಂದಲ ನಿರ್ಮಾಣ ಉಂಟಾಗಿದೆ. ಪಡಿತರ ಅಂಗಡಿಯಲ್ಲಿ ಪಡೆದ ಅಕ್ಕಿಯಲ್ಲಿನ ಸಾರಯುಕ್ತ ಅಕ್ಕಿಯನ್ನು ಬೇರ್ಪಡಿಸಿ ಸಾರ್ವಜನಿಕರು ಉಪಯೋಗಿಸುತ್ತಿರುವುದು ಹೆಚ್ಚಾಗಿದೆ.
ಸಾರಯುಕ್ತ ಅಕ್ಕಿಯ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುತ್ತಿಲ್ಲ. ತೀವ್ರ ಗೊಂದಲದಲ್ಲಿ ಸಾರ್ವಜನಿಕರು ಹೀಗಾಗಿ ಸಾರಾಯುಕ್ತ ಅಕ್ಕಿಯನ್ನು ಬೇರ್ಪಡಿಸಿ ಬಳಸುತ್ತಿದ್ದಾರೆ.
ವಿಡಿಯೋ ನೋಡಿ:
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA



