ರಾಜ್ಯಾದ್ಯಂತ ಟೋಲ್ ಗೇಟ್ ಗಳನ್ನು ನಿರ್ವಹಿಸುವ ಎಲ್ಲಾ ಖಾಸಗಿ ಏಜೆನ್ಸಿಗಳು ಪಾವತಿಸಬೇಕಾದ ದೀರ್ಘಾವಧಿಯ ಮುದ್ರಾಂಕ ಶುಲ್ಕದ ಸಮಸ್ಯೆಯನ್ನು ಪರಿಹರಿಸಲು ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಮುಂದಾಗಿದೆ.
ಟೋಲ್ ಗೇಟ್ ಗಳನ್ನು ನಿರ್ವಹಿಸಲು ಏಜೆನ್ಸಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಇಲಾಖೆಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ ಎಚ್ ಎಐ) ಪತ್ರ ಬರೆದಿದ್ದು, ಅವರಿಂದ ಬಾಕಿ ಇರುವ ಸ್ಟ್ಯಾಂಪ್ ಸುಂಕವನ್ನು ಸಂಗ್ರಹಿಸಬಹುದಾಗಿದೆ.


