ಬಿಹಾರದ ಸುಂದರ್ ಗಢ್‌ನಲ್ಲಿರುವ ಬ್ರಿಲಿಯಂಟ್ ಕಾನ್ವೆಂಟ್ ಶಾಲೆಯ ಪರೀಕ್ಷಾ ಹಾಲ್‌ನಲ್ಲಿ ಹುಡುಗಿಯರು ತುಂಬಿರುವುದನ್ನು ನೋಡಿದ 17 ವರ್ಷದ ಯುವಕ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ನಡೆದಿದೆ.
ಪರೀಕ್ಷೆ ಹಾಲ್ ತುಂಬಾ ಹುಡುಗಿಯರನ್ನು ನೋಡಿ ವಿದ್ಯಾರ್ಥಿ ಗೊಂದಲಕ್ಕೊಳಗಾಗಿದ್ದು, ಈ ಆಘಾತದಿಂದ ಈತ ತಲೆತಿರುಗಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಬಿಹಾರದ ಷರೀಫ್ ಅವರ ಅಲ್ಲಮ ಇಕ್ಬಾಲ್ ಕಾಲೇಜಿನ ವಿದ್ಯಾರ್ಥಿ ಮನೀಶ್ ಶಂಕರ್ ಪ್ರಸಾದ್ (17) ಪರೀಕ್ಷೆಯ ಸೀಸನ್ ನ ಮೊದಲ ದಿನ ಗಣಿತ ಪರೀಕ್ಷೆಗೆ ಹಾಜರಾಗಿದ್ದಾಗ ಕುಸಿದುಬಿದ್ದಿದ್ದಾನೆ.
ವಿದ್ಯಾರ್ಥಿಯ ಪರೀಕ್ಷಾ ಕೇಂದ್ರವು ಸುಂದರ್‌ಗಢದ ಬ್ರಿಲಿಯಂಟ್ ಕಾನ್ವೆಂಟ್ ಶಾಲೆಯಾಗಿತ್ತು. ಪರೀಕ್ಷಾ ಕೇಂದ್ರವನ್ನು ತಲುಪಿದಾಗ, ಅಭ್ಯರ್ಥಿಗಳಲ್ಲಿ ಅವನು ಒಬ್ಬನೇ ಹುಡುಗ ಎಂದು ವಿದ್ಯಾರ್ಥಿಗೆ ಅರಿವಾಯಿತು. ಇದರಿಂದ ಗಾಬರಿಗೊಂಡ ವಿದ್ಯಾರ್ಥಿ ಸಭಾಂಗಣದಲ್ಲಿ ಕುಸಿದು ಬಿದ್ದಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


