ಭಾರತದ ಆಗರ್ಭ ಶ್ರೀಮಂತ , ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ, ಸಂಪೂರ್ಣವಾಗಿ 5ಜಿ ತಂತ್ರಜ್ಞಾನವನ್ನು ಸಾಕಾರಗೊಳಿಸುವುದು ಭಾರತದ ಪ್ರಥಮ ಆದ್ಯತೆಯಾಗಬೇಕು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಭಾಗವಹಿಸಿದ್ದ ಮುಕೇಶ್ ಅಂಬಾನಿ 5ಜಿ ದೇಶದ ಪ್ರಥಮ ಆದ್ಯತೆಯಾಗಬೇಕು. 2ಜಿ , 4ಜಿ ಇಂದ ಎಲ್ಲರೂ ಶೀಘ್ರದಲ್ಲೇ 5ಜಿಗೆ ಅಪ್ ಡೇಟ್ ಆಗಬೇಕು ಎಂದು ಡಿಜಿಟಲ್ ಕ್ರಾಂತಿಗೆ ಕರೆ ನೀಡಿದ್ದಾರೆ.
ಅಲ್ಲದೇ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕೆಳಗಿರುವ ಜನರನ್ನು 2ಜಿಗೆ ಸೀಮಿತಗೊಳಿಸುವುದು ಡಿಜಿಟಲ್ ಕ್ರಾಂತಿಯ ಪ್ರಯೋಜನಗಳಿಂದ ಅವರನ್ನು ಹೊರಗಿಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.
ವರದಿ: ಆಂಟೋನಿ ಬೇಗೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700