nammatumakuru

    Subscribe to Updates

    Get the latest creative news from FooBar about art, design and business.

    What's Hot

    ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ

    November 23, 2025

    ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ:  ನಗನಗದು ದೋಚಿ ಪರಾರಿ

    November 23, 2025

    ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ

    November 23, 2025
    Facebook Twitter Instagram
    ಟ್ರೆಂಡಿಂಗ್
    • ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
    • ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ:  ನಗನಗದು ದೋಚಿ ಪರಾರಿ
    • ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
    • ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
    • ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
    • ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
    • ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
    • ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕರ್ನಾಟಕ ರಣಧೀರರ ವೇದಿಕೆ ವತಿಯಿಂದ 5ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ: ಸಾಧಕರಿಗೆ ಪ್ರಶಸ್ತಿ ಪ್ರದಾನ
    ರಾಜ್ಯ ಸುದ್ದಿ November 29, 2024

    ಕರ್ನಾಟಕ ರಣಧೀರರ ವೇದಿಕೆ ವತಿಯಿಂದ 5ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ: ಸಾಧಕರಿಗೆ ಪ್ರಶಸ್ತಿ ಪ್ರದಾನ

    By adminNovember 29, 2024No Comments4 Mins Read
    kannada rajyothsava

    ನೆಲಮಂಗಲ : ಕರ್ನಾಟಕ ರಣಧೀರರ ವೇದಿಕೆ ವತಿಯಿಂದ ಐದನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಮತ್ತು ತಾಯಿ ಭುವನೇಶ್ವರಿ ಅಬ್ಬ ಹಾಗೂ ಹೊಯ್ಸಳ ವಿಜಿಷ್ಟ ಸೇವಾ ಪುರಸ್ಕಾರ 2024ರ ಸಮಾರಂಭವು ಬಹಳ ಅದ್ದೂರಿಯಾಗಿ ಜರುಗಿತು.

    ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಪಡೆದಂತಹ ಶ್ರೀಕ್ಷೇತ್ರ ಕುಂಚಶ್ರೀ ಎಲೆರಾಂಪುರ ಮಠದ ಪೀಠಾಧ್ಯಕ್ಷರಾದ  ಶ್ರೀ ಶ್ರೀ ಹನುಮಂತನಾಥ ಮಹಾ ಸ್ವಾಮೀಜಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ನಮ್ಮ ನಾಡಿನಲ್ಲಿ ಅನೇಕ  ಹಾಗೂ ಅನೇಕ ವಿದ್ಯಾ ಸಮೂಹಗಳು ಪ್ರಶಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಆದರೆ ಕರ್ನಾಟಕ ರಣಧೀರರ ವೇದಿಕೆಯವರು ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಹರುಷ ವ್ಯಕ್ತಿಗಳನ್ನು ಗುರುತಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಗೌರವ ಕೊಡುತ್ತಿರುವುದು ಬಹಳ ಸಂತೋಷವಾಗಿದೆ ಅಲ್ಲದೆ ನಾವು ಗಮನಿಸಿದಂತೆ ರಾಜ್ಯದಲ್ಲಿ ಕರ್ನಾಟಕ ರಣಧೀರರ ವೇದಿಕೆಯು ಬಹಳ ಗಾಂಭೀರ್ಯದಲ್ಲಿ ಸಿಂಹದ ಹೆಜ್ಜೆಯಂತೆ ಹೋರಾಟದ ಹೆಜ್ಜೆಗಳನ್ನಾಕುತ್ತಿರುವುದು ಬಹಳ ಸಂತೋಷವಾಗಿದೆ ಕರ್ನಾಟಕ ರಣಧೀರರ ವೇದಿಕೆ ಹೋರಾಟಕ್ಕೆ ನಾವು ಸದಾ ಬೆಂಬಲಿಸುತ್ತೇವೆ ಎಂದು ಹೇಳಿದರು.


    Provided by
    Provided by

    ಇದೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಣಧೀರದ ವೇದಿಕೆ ವತಿಯಿಂದ ಲೋಕಾರ್ಪಣೆಗೊಂಡ ರಣಧೀರ ಸುದ್ಧಿ ಎಂಬ ವಾಹಿನಿಯನ್ನು ಲೋಕಾರ್ಪಣೆಗೊಳಿಸಿದ  ಬಾಳೆಹೊನ್ನೂರು ಖಾಸ ಶಾಖಾಮಠದ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ರವರು ಶಂಕರ್ ಗೌಡ್ರು ರವರ ನೇತೃತ್ವದಲ್ಲಿ ಕರ್ನಾಟಕ ರಣಧೀರರ ವೇದಿಕೆ ಪ್ರಾರಂಭವಾದ ದಿನದಿಂದಲೂ ಕೂಡ ನಾವುಗಳು ಈ ಸಂಘಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು ಬಹಳ ಸಂತೋಷ ವಾಗುವುದರ ಜೊತೆಗೆ ಬಹಳ ಹೆಮ್ಮೆ ಎನಿಸಿದೆ ಕಾರಣ ಸಂಘಟನೆಯ ಅಧ್ಯಕ್ಷರಾದ ಶಂಕರ್ ಗೌಡ್ರು ಅವರು ಪ್ರತಿ ವರ್ಷವೂ ವಿಭಿನ್ನ ರೀತಿಯ ವಿಶಾಲವಾದ ಮನಸ್ಥಿತಿಯಲ್ಲಿ ತೀಕ್ಷ್ಣವಾಗಿ ಯೋಚಿಸಿ  ನಾಡಿನ ಜನತೆಗಳಿಗೆ ಸದುಪಯೋಗವಾಗುವ ಉನ್ನತ ಕೆಲಸಗಳನ್ನು  ಪ್ರತಿ ವರ್ಷವೂ ಒಂದರಂತೆ  ಜಾರಿಗೆ ತರುತ್ತಿರುವುದು ಬಹಳ ಆನಂದವಾಗಿದೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿರುವುದು, ತಾಯಿ ಶ್ರೀ ಭುವನೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಾರ್ಪಣೆ ಮಾಡಿದ ಕೆಲಸ, ಬಡ ಹೆಣ್ಣು ಮಕ್ಕಳಿಗೆ ಸೀರೆ ಹಂಚುವ ಕೆಲಸ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹುಡುಕಿ ಅವರಿಗೆ  ವಿದ್ಯಾಬ್ಯಾಸಕ್ಕೆ ಬೇಕಾಗುವ ಪರಿಕರಗಳನ್ನು ನೀಡುವ ಕೆಲಸ ಮಾಡುತ್ತಿರುವುದು ಬಹಳ ಅದ್ಭುತವಾದಂತಹ ಆಲೋಚನೆ   ಎಲ್ಲ ಸಮಾಜಮುಖಿ ಕೆಲಸಗಳಿಗೆ ನಾವು ಸದಾ ಬೆಂಬಲಿಸುತ್ತೇವೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು ಶ್ರೀ ಕ್ಷೇತ್ರ ಪವಾಡ ಶ್ರೀ ಬಸವಣ್ಣ ದೇವರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ರವರು  ಮಾತನಾಡಿ ನಾವು ಗಮನಿಸಿದಂತೆ ಕರ್ನಾಟಕ ರಣಧೀರರ ವೇದಿಕೆಯವರು ಪ್ರತಿ ವರ್ಷವೂ ಅದ್ದೂರಿಯಾಗಿ ವಿಭಿನ್ನವಾಗಿ ಸಮಾಜಕ್ಕೆ ಉದಾರಣೆಯಾಗುವಂತೆ ಅನೇಕ ಕಾರ್ಯಗಳನ್ನು ಮಾಡುತ್ತ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯವಾದ ವಿಚಾರ ಅಲ್ಲದೆ ರಾಜ್ಯಾಧ್ಯಕ್ಷರಾದ ಶಂಕರ್ ಗೌಡರ ಧೈರ್ಯವನ್ನು ಮೆಚ್ಚಲೇಬೇಕಾದ್ದೇ  ಕಾರಣ ಯಾವುದೇ ಪಕ್ಷವಾಗಲಿ ಅಧಿಕಾರಿಗಳಾಗಲಿ ಯಾರಿಗೂ ಮುಲಾಜು ಕೊಡದೆ ನಿಷ್ಟೂರವಾಗಿ ಶೋಷಿತರ ನೊಂದವರ ಧ್ವನಿಯಾಗಿ ನಿಷ್ಟೂರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳುವುದರ ಜೊತೆಗೆ ನೂತನವಾಗಿ  ಪ್ರಾರಂಭಿಸಿರುವ ರಣಧೀರ ಸುದ್ದಿ ಎಂಬ ವಾಹಿನಿಯು ರಾಜ್ಯಾದ್ಯಂತ ಪ್ರತಿ ಮನೆಮನೆಗು ತಲುಪುವ ಮಟ್ಟಿಗೆ ಭ್ರಷ್ಟರನ್ನು ಮಟ್ಟ ಹಾಕುವ ಒಂದು ದೊಡ್ಡ ವಾಹಿನಿಯಾಗಿ ಬೆಳೆಯಲಿ ಹಾಗೂ ಸಮಾಜದ ಎಲ್ಲ ವರ್ಗದ ಜನಗಳಿಗೂ ಕೂಡ  ಒಳಿತನ್ನು ಮಾಡುವಂತಹ ಉನ್ನತ ವಾಹಿನಿಯಾಗಲಿ ಎಂದು ಶುಭಹಾರೈಸಿ ನುಡಿದರು

    ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ನೆಲಮಂಗಲ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಸುಗ್ಗರಾಜುರವರು  ಕನ್ನಡ ನಾಡು ನುಡಿ ಜಲ ಭಾಷೆಯ ವಿಚಾರವಾಗಿ ಕನ್ನಡಪರ ಸಂಘಟನೆಗಳು ಬಹಳ ಶ್ರಮಿಸುತ್ತಿವೆ, ಅದರಲ್ಲೂ ನೆಲಮಂಗಲ ಭಾಗದಲ್ಲಿ ಕರ್ನಾಟಕ ರಣಧೀರರ ವೇದಿಕೆಯು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು ಬಹಳ ಸಂತೋಷಕರವಾದ ವಿಚಾರ, ಕನ್ನಡಿಗರು ತಮ್ಮ ಭಾಷೆಯ ಮೇಲಿನ ಮಮಕಾರವನ್ನ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಭಾಷೆಯ ಅಸ್ತಿತ್ವದ ಕಡೆ ಯೋಚನೆ ಮಾಡುತ್ತಿಲ್ಲ ಇದು ಶೋಚನೆಯ ವಿಚಾರ  ಮುಂದಿನ ದಿನಗಳಲ್ಲಿ ಕನ್ನಡಿಗರೆಲ್ಲರೂ ಒಗ್ಗೂಡಿ ಕನ್ನಡದ ಅಸ್ತಿತ್ವಕ್ಕೆ ಹೋರಾಟ ಮಾಡಬೇಕು ಎಂದು ಹೇಳಿದರು.

    ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕನ್ನಡಿಗರು ಎಲ್ಲಾ ಕ್ಷೇತ್ರದಲ್ಲಿ ಉದ್ಯೋಗವಂತರಾಗಬೇಕು ಅಲ್ಲದೆ ಉದ್ಯಮಿಗಳಾಗಿ ಬೆಳೆಯಬೇಕು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ  ನಡೆದುಕೊಳ್ಳಬೇಕು ಹಾಗೂ ವಲಸಿಗರ ಹಾವಳಿಯು ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಈ ಕೂಡಲೇ ಅಂತರ್ ರಾಜ್ಯ ವಲಸೆ ಜಾರಿ ನೀತಿ ಜಾರಿ ಮಾಡಬೇಕು ಇಲ್ಲವಾದರೆ ಕನ್ನಡಿಗರ ಪರಿಸ್ಥಿತಿ ಶೋಚನೀಯವಾದ ಸ್ಥಿತಿಗೆ ತಲುಪುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ, ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಅಧಿಕಾರಿಗಳು ಕನ್ನಡಿಗರಿಗೆ ಸೇರಬೇಕಾದ ಹಲವು ಹತ್ತಾರು ಯೋಜನೆಗಳಿಗೆ ಅನುದಾನದ ಕೊರತೆ ಇದೆ ಎಂಬುದಾಗಿ ಹೇಳುತ್ತಿರುವುದು ನಮ್ಮ ರಾಜ್ಯದ ಜನತೆಯ ದುರ್ದೈವವಾಗಿದೆ ರಾಜ್ಯ ಸರ್ಕಾರವು ಈ ಕೂಡಲೇ ಜನರಿಗೆ ತಲುಪಬೇಕಾದ ಯೋಜನೆಗಳ ಅನುದಾನವನ್ನು ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ವಿಧಾನಸೌಧಕ್ಕೆ ಮುತ್ತುಗೆ ಹಾಕುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದಂತಹ ಶ್ರೀಯುತ ಡಾ. ಪಾಪಣ್ಣ ಸ್ವಾಮಿರವರು,ಅಶ್ವಥ್ ಟಿ ಮರಿಗೌಡ್ರು ರವರು, ಶ್ರೀಯುತ ಪ್ರಜಾಕವಿ ಎನ್.ಆರ್ ನಾಗರಾಜುರವರು ಎಂಬ ಸಾಧಕರಿಗೆ ಹೊಯ್ಸಳ ವಿಶಿಷ್ಟ ಸೇವಾ ಪುರಸ್ಕಾರ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸುವುದರ ಜೊತೆಗೆ ಅತ್ಯುನ್ನತ ಸಾಧನೆಗೈದಂತಹ ಶ್ರೀಮತಿ ನಹಿದಾ ಜಮ್ ಜಮ್ ರವರು, ಕುಲಸಚಿವರು ತುಮಕೂರು ವಿಶ್ವವಿದ್ಯಾನಿಲಯ ರವರಿಗೆ ರಾಣಿ ಚೆನ್ನಾಭೈರ ದೇವಿ ಎಂಬ ಪ್ರಶಸ್ತಿಯನ್ನು ಒಳಗೊಂಡ ಬಿರುದನ್ನು ನೀಡಿದರು ಮತ್ತು ಶ್ರೀಮತಿ ಬಿ ಕೆ ಅರುಣ ಜ್ಯೋತಿರವರು ಸಂಪಾದಕರು ಕಾಯಕಯೋಗಿ ಪ್ರಾದೇಶಿಕ ದಿನಪತ್ರಿಕೆ ರವರಿಗೆ ಕನ್ನಡ ಚಳುವಳಿಯ ಕಲಿ ಎಂಬ ಪ್ರಶಸ್ತಿಯನ್ನು ಒಳಗೊಂಡ ಬಿರುದನ್ನು ನೀಡಿದರು..

    ಪ್ರಶಸ್ತಿ ಸ್ವೀಕರಿಸಿದ ಶ್ರೀಮತಿ ನಹಿದಾ ಜಮ್ ಜಮ್ ರವರು  ಮಾತನಾಡಿ ಶಂಕರ್ ಗೌಡ್ರು ನೇತೃತ್ವದ ಕರ್ನಾಟಕ ರಣಧೀರರ  ವೇದಿಕೆಯವರು ನೀಡಿದ ಗೌರವವನ್ನು ಸ್ವೀಕರಿಸಿದ್ದು ನನಗೆ ಬಹಳ ಸಂತೋಷವಾಗಿದೆ ಕಾರಣ ಇಷ್ಟೇ ನಾನು ಗಮನಿಸಿದಂತೆ ತುಮಕೂರು ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಶಾಲೆಯನ್ನು ಉಳಿಸುವ ಹೋರಾಟಗಳಲ್ಲಿ ಮುಂಚೂಣಿ ಹೋರಾಟವನ್ನು ಮಾಡುತ್ತಿದ್ದು ಅಲ್ಲದೆ ಅನೇಕ ಭ್ರಷ್ಟರಿಗೆ ಕಾನೂನು ಚಾಟಿಯನ್ನು ಬಿಸಿ ಮಟ್ಟ ಹಾಕಿದ್ದಾರೆ ಅಲ್ಲದೆ ನನ್ನ ತಂದೆಯವರು ಕೂಡ ಗೋಕಾಕ್ ಚಳುವಳಿಯ ಹೋರಾಟಗಾರರಾಗಿದ್ದು ನನಗೆ ಕನ್ನಡಪರ ಸಂಘಟನೆಯಿಂದ ಪ್ರಶಸ್ತಿ ದೊರಕಿರುವುದು ಬಹಳ ಹೆಮ್ಮೆ ಎನಿಸಿದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪೂರ್ಣಿಮಾ ಸುಗ್ಗರಾಜು ರವರು, ಯಶವಂತ್ ಹಸಿರುಹಳ್ಳಿ, ಕಾಳಜಿ ತಂಡದ ಮುಖ್ಯಸ್ಥರುಗಳಾದ ಜಿ.ಎಲ್.ನಟರಾಜು, ಶಿವಕುಮಾರ್ ಮೇಷ್ಟ್ರು ಮನೆ, ಗಣೇಶ್, ಪದ್ಮನಾಭನ್ ಮೋಹನ್ ಕುಮಾರ್.ಕೆ., ಮಾಚನಹಳ್ಳಿ ಮುನಿರಾಜು, ರವಿಕುಮಾರ್ ಡಿ.ಜಿ,  ಶಿವರಾಮಯ್ಯ, ಮತ್ತು ಕನ್ನಡ ಪರ ಹೋರಾಟಗಾರರದ ಗುರುದೇವ್ ನಾರಾಯಣ್ ಕುಮಾರ್, ಚೇತನ್ ಗೌಡ, ಪ್ರಸನ್ನ ಗೌಡ, ಚೇತನ್ ಕನ್ನಡಿಗ, ಅಶ್ವಥ್ ಗೌಡ, ಮಲ್ಲೇಶ್,ಸಂಘಟನೆ   ನೆಲಮಂಗಲ ತಾಲ್ಲೂಕು ಅಧ್ಯಕ್ಷರಾದ ಮೂರ್ತಿ  ಹಾಗೂ ಕಾರ್ಯಕರ್ತರುಗಳಾದ ತಿಮ್ಮಪ್ಪ ಗೌಡ ಕೆ.ಎಸ್.,  ರಾಮಾಂಜಿನಯ, ಕಾಂತ್ ಕುಮಾರ್, ಭೈರವ, ಮಹೇಶ್ ಗೌಡ, ಬಿ.ಎನ್. ವಿಜಿ ಕುಮಾರ್, ಶ್ರೀಮತಿ ಜಯಶ್ರೀ, ರವಿ ನಾಯಕ್,ರಾಕೇಶ್ ಕುಮಾರ್ ಟಿ., ಡಾ.ಬಸವರಾಜು, ರಮೇಶ್, ಅರುಣ್ ಕುಮಾರ್, ಹರ್ಷ ದಳಪತಿ, ಕೃಷ್ಣಮೂರ್ತಿ ಪ್ರವೀಣ್ ಗೌಡ, ನಾಗರಾಜು, ನಾಗರಾಜು ಎಸ್, ಶ್ರೀಮತಿ ಪ್ರಮೀಳಾ, ದೇವರಾಜ್ ಕೆ, ಕಿರಣ್ ಗಾಂವಕರ ನಾಯ್ಕ,ಮಂಜುಸ್ವಾಮಿ ಎಂ.ಎನ್,ಸುರೇಶ್ ಎನ್ ಎಸ್, ಪ್ರದೀಪ್, ಮುತ್ತೂರಾಜು, ಎ.ಲೋಕೇಶ್ ರವರನ್ನು ಒಳಗೊಂಡಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಮೆಕ್ಕೆಜೋಳ, ಹೆಸರುಕಾಳು ಬೆಳೆಗಾರರ ನೆರವಿಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    November 22, 2025

    ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್

    November 16, 2025

    ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿಧನ

    November 14, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ

    November 23, 2025

    ತುಮಕೂರು: ನಗರದ ಸರಸ್ವತಿಪುರಂನಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಜಿಲ್ಲಾ ಬಂಜಾರ ಭವನದ ಉದ್ಘಾಟನೆಯನ್ನು ಡಿಸೆಂಬರ್ 14ರಂದು  ನೆರವೇರಿಸಲಿದ್ದು, ಗೃಹ ಹಾಗೂ ಜಿಲ್ಲಾ…

    ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ:  ನಗನಗದು ದೋಚಿ ಪರಾರಿ

    November 23, 2025

    ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ

    November 23, 2025

    ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ

    November 23, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.